Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆ ಪ್ರತಿಭಾ ದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಪ್ರತಿಭಾ ದಿನೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದೀಪ ಪ್ರಜ್ವಲನಗೊಳಿಸುವ ಮೂಲಕ ಹಿರಿಯ ವಿದ್ಯಾರ್ಥಿ ಡಾಕ್ಟರ್ ಸಿಂಧುಶ್ರೀ ಬಳ್ಳಕ್ಕುರಾಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ಮಾತನಾಡಿದ ಅವರು ಜೀವನದ ಮೌಲ್ಯಗಳನ್ನು ಮಾತೃಭಾಷೆಯ ಮಾತೃವಾತ್ಸಲ್ಯದ ಜೊತೆ ನೀಡುವ ಶ್ರೇಷ್ಠತೆ ಶ್ರೀರಾಮ ಪ್ರೌಢಶಾಲೆ ಎಂದು ಬಾಲ್ಯದ ನೆನಪಿನ ಬುತ್ತಿಯನ್ನು ವಿದ್ಯಾರ್ಥಿಗಳಿಗೆ ಹಂಚಿದರು. ಹಾಗೂ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಇನ್ನೋರ್ವ ಹಿರಿಯ ವಿದ್ಯಾರ್ಥಿ ಶ್ರೀ ಜಯ ಪ್ರಶಾಂತ್ ಕೆಆರ್ ಮಾಲಕರು ಸ್ಟಾರ್ ಗ್ರೂಪ್ ಮಂಗಳೂರು ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಘನತೆ ಶ್ರೀರಾಮ ಪ್ರೌಢಶಾಲೆಯದು ಈಗಿನ ವೇಗದ ಶಿಕ್ಷಣದಲ್ಲಿ ನಾವೆಲ್ಲರೂ ಹೊಂದಿಕೊಳ್ಳಲೇಬೇಕೆಂದು ಶುಭಾಶಯ ತಿಳಿಸಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಾಂಭವಿ ಮಾತಾಜಿ ಅಧ್ಯಾಪಕರಿಗೆ ಅಧ್ಯಾಪನದ ಸಾಫಲ್ಯತೆ ಅವರ ಶಿಷ್ಯಂದಿರು ಅವರಿಗಿಂತ ಉನ್ನತ ಮಟ್ಟಕ್ಕೆ ಏರಿದಾಗ ಎಂದು ಧನ್ಯತಾಭಾವ ತಿಳಿಸಿ ಶ್ರದ್ಧೆಯಿಂದ ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳು ಉಜ್ವಲವಾಗಲೆಂದು ಹರಸಿದರು ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಲಕ್ಷ್ಮಿ ರಘುರಾಜ್ ಹಾಗೂ ಶ್ರೀಮತಿ ಸುಹಾಸಿನಿ ಜಯ ಪ್ರಶಾಂತ್ ಉಪಸ್ಥಿತರಿದ್ದರು.

ವಿದ್ಯಾ ಕೇಂದ್ರದ ಸಂಸ್ಥಾಪಕರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಡಾಕ್ಟರ್ ಪ್ರಭಾಕರ್ ಭಟ್ ಕಲ್ಲಡ್ಕ ಇವರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನಗೈದು ರಂಜಿಸಿದರು ಬಹುಮಾನ ವಿಜೇತರ ಪಟ್ಟಿಯನ್ನು ಶ್ರೀ ಗೋಪಾಲ್ ಶ್ರೀಮಾನ್ ವಾಚಿಸಿ ಶ್ರೀಮತಿ ವಿನುತಾ ಲಕ್ಷ್ಮಿಮಾತಾಜಿ ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಿ ವಿದ್ಯಾರ್ಥಿ ಆದಿತ್ಯಕೃಷ್ಣ ನಿರೂಪಿಸಿ ಆತ್ರೇಯ ಸ್ವಾಗತಿಸಿ ಜಯಸೂರ್ಯ ವಂದಿಸಿದರು