Recent Posts

Sunday, January 19, 2025
ಕ್ರೈಮ್ಸುದ್ದಿ

ಪಾದ್ರಿಯ ನಿವಾಸದಲ್ಲಿ ಸಮಾಲೋಚನೆ ಮತ್ತು ಪ್ರಾರ್ಥನೆ ವೇಳೆ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ; ಆರ್ಥೊಡಾಕ್ಸ್ ಚರ್ಚ್‌ನ ಪಾದ್ರಿ ಬಂಧನ – ಕಹಳೆ ನ್ಯೂಸ್

ಪಟ್ಟನಂತಿಟ್ಟ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪತ್ತನಂತಿಟ್ಟದ ಆರ್ಥೊಡಾಕ್ಸ್ ಚರ್ಚ್‌ಗೆ ಸೇರಿದ ಪಾದ್ರಿಯೊಬ್ಬರನ್ನು (Orthodox Church Priest) ಬಂಧಿಸಲಾಗಿದೆ.

ಪತ್ತನಂತಿಟ್ಟ ಜಿಲ್ಲೆಯ (Pathanamthitta) ಕೂಡಲ್‌ನ ಓಥೊಡಾಕ್ಸ್ ವಲಿಯಪಲ್ಲಿಯ ಪಾಂಡ್ಸನ್ ಜಾನ್​ರನ್ನು (35) ಗುರುವಾರ ಪತ್ತನಂತಿಟ್ಟ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳ ತಂಡವು ಕೊಡುಮಾನ್‌ನಲ್ಲಿರುವ ಅವರ ಮನೆಯಿಂದ ಬಂಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ 2012 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರ ಪ್ರಕಾರ, ಮಾರ್ಚ್ 12 ರಂದು 17 ವರ್ಷದ ಸಂತ್ರಸ್ತೆಯ ತಾಯಿ ಕೂಡಲ್‌ನಲ್ಲಿರುವ ಪಾದ್ರಿಯ ನಿವಾಸದಲ್ಲಿ ಸಮಾಲೋಚನೆ ಮತ್ತು ಪ್ರಾರ್ಥನೆಗಾಗಿ ವಿನಂತಿಸಿದ್ದರು. ಈ ವೇಳೆ ಘಟನೆ ಸಂಭವಿಸಿದೆ. ಪಾದ್ರಿ ಬಾಲಕಿಗೆ ಕಿರುಕುಳ ನೀಡಿದ್ದು, ಮರುದಿನ ಆಕೆಯ ಮನೆಯಲ್ಲಿ ಮತ್ತೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಲಕಿಯ ಶಿಕ್ಷಕಿ ನೀಡಿದ ಸುಳಿವು ಆಧರಿಸಿ ಚೈಲ್ಡ್‌ಲೈನ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಎ ಆರ್ ಲೀಲಾಮಾ ಬಾಲಕಿಯಿಂದ ಹೇಳಿಕೆ ಪಡೆದು ಮಾರ್ಚ್ 16 ರಂದು ಪ್ರಕರಣ ದಾಖಲಿಸಿದ್ದರು.