ಪುತ್ತೂರು ಜಾತ್ರೋತ್ಸವದ ಪ್ರಯುಕ್ತ ಏಪ್ರಿಲ್ 10 ರಿಂದ 25ರ ವರೆಗೆ ಪುತ್ತೂರು ವ್ಯವಹಾರ ಮೇಳ-ವ್ಯವಹಾರಕ್ಕೆ ಹಿಂದೂ ಬಾಂದವರಿಗೆ ಮಾತ್ರ ಅವಕಾಶ- ಕಹಳೆ ನ್ಯೂಸ್
ಪುತ್ತೂರು : ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ, ಏಪ್ರಿಲ್ 10 ರಿಂದ 17ರ ವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ.
ಪುತ್ತೂರು ಜಾತ್ರೋತ್ಸವದ ಪ್ರಯುಕ್ತ, ಏಪ್ರಿಲ್ 10 ರಿಂದ 25ರ ವರೆಗೆ, ಪುತ್ತೂರು ವ್ಯವಹಾರ ಮೇಳ, ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ. ಪುತ್ತೂರು ವ್ಯವಹಾರ ಮೇಳದಲ್ಲಿ ವ್ಯಾಪಾರ ಹಾಗೂ ವ್ಯವಹಾರಕ್ಕೆ ಹಿಂದೂ ಬಾಂದವರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಜಾತ್ರೆಗದ್ದೆ ಸಂತೆ ಏಲಂ ಪ್ರಕಟಣೆ
1.ಶ್ರೀ ದೇವಳದ ಎದುರು ಭಾಗದ ಗದ್ದೆಯಲ್ಲಿ ತಾತ್ಕಾಲಿಕ ಅಂಗಡಿ ವ್ಯಾಪಾರಗಳಿಗೆ ದೇವಳದ ಕಛೇರಿಯಿಂದ ಸೂಚಿಸಿದ ಪ್ರಕಾರ ಗುರುತಿಸಿದ ಜಾಗವನ್ನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಮಾ. 29 ರಂದು ಪೂರ್ವಾಹ್ನ 11 ಗಂಟೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಶ್ರೀ ದೇವಳದ ಸಭಾ ಭವನದಲ್ಲಿ ಏಲಂ ಮಾಡಲಾಗುವುದು. ಇ.ಎಂ.ಡಿ. ಮೊತ್ತ ರೂ. 10,000/-
2.ದೇವಳದ ಎದುರು ಮೈದಾನದಲ್ಲಿ ಅನ್ನಛತ್ರದ ಹಿಂಬದಿ ಜಾಯಿಂಟ್ ವೀಲ್, ಸರ್ಕಸ್ ಮೊದಲಾದ ದೊಡ್ಡಮಟ್ಟದ ಕಾರ್ಯಕ್ರಮ ನಡೆಸಲು ದೇವಳದ ಕಛೇರಿಯಿಂದ ಸೂಚಿಸಿದ ಪ್ರಕಾರ ಸದರಿ ಜಾಗವನ್ನು ಹಂಚಿಕೆ ಮಾಡಿಕೊಳ್ಳುವ ಸಲುವಾಗಿ ಮಾ.31ರಂದು ಪೂರ್ವಾಹ್ನ 11 ಗಂಟೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಶ್ರೀ ದೇವಳದ ಸಭಾಭವನದಲ್ಲಿ ಏಲಂ ಮಾಡಲಾಗುವುದು ಇ.ಎಂ.ಡಿ. ಮೊತ್ತ 20,000/-
ಆಧಾರ್ ಕಾರ್ಡ್‍ನ ಪ್ರತಿ 1, ಇತ್ತೀಚಿನ 2 ಭಾವಚಿತ್ರ ಮುಂಚಿತವಾಗಿ ನೀಡಿ ಏಲಂನಲ್ಲಿ ಭಾಗವಹಿಸುವುದು, ಹಿಂದೂ ಬಾಂದವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಇರುವುದು.
ಯಶಸ್ವಿ ಬಿಡ್ಡುದಾರರು ಏಲಂ ನಡೆದ ದಿನದಂದೇ ಅಪರಾಹ್ನ 2.00 ಗಂಟೆಯ ಒಳಗಾಗಿ ಏಕಗಂಟಿನಲ್ಲಿ ಅಂತಿಮ ಬಿಡ್ ಮೊಬಲಗನ್ನು ಕಡ್ಡಾಯವಾಗಿ ಪಾವತಿಸಿ ಕಚೇರಿಯಿಂದ ರಶೀದಿ ಪಡೆದುಕೊಳ್ಳತಕ್ಕದ್ದು ತಪ್ಪಿದಲ್ಲಿ ಠೇವಣಿ ಮೊಬಲಗನ್ನು ದೇವಳದ ನಿಧಿಗೆ ಮುಟ್ಟುಗೋಲು ಹಾಕಿಕೊಂಡು, ಮರು ಹರಾಜು ಮಾಡಲಾಗುವುದು.
ಸಂದರ್ಭಾನುಸಾರ ಕಾರಣ ನೀಡದೆ ಒಪ್ಪಿಕೊಳ್ಳುವ ಯಾ ತಿರಸ್ಕರಿಸುವ ಹಕ್ಕನ್ನು ದೇವಳದ ಆಡಳಿತ ಮಂಡಳಿ ಕಾದಿರಿಸಿಕೊಂಡಿದೆ.
ಷರತ್ತುಗಳನ್ನು ದೇವಳದ ಕಚೇರಿಯ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗುವುದು.
ನಿಮ್ಮ ಸ್ಟಾಲ್ ಈ ಕೂಡಲೇ ಬುಕ್ ಮಾಡಲು 9980546864, 9900160916, 9686328337, 9591889368 ಸಂಪರ್ಕಿಸಿ.