Sunday, January 19, 2025
ಕ್ರೈಮ್ದಕ್ಷಿಣ ಕನ್ನಡರಾಜಕೀಯರಾಜ್ಯಸುದ್ದಿ

ಕೋರ್ದಬ್ಬು ದೈವಸ್ಥಾನ ಅಪವಿತ್ರಗೊಳಿಸಿದ್ದ ಮುಸ್ಲಿಂ ಯುವಕ ಸಾಹುಲ್ ಹಮೀದ್ ಸೆರೆ – ಕಹಳೆ ನ್ಯೂಸ್

ಮಂಗಳೂರು, ಮಾ 22 : ಕೈಕಂಬ ಸಮೀಪದ ಕಂದಾವರ ಗ್ರಾಮದ ಶ್ರೀ ಕೋರ್ದಬ್ಬು ದೈವಸ್ಥಾನವನ್ನು ಅಪವಿತ್ರಗೊಳಿಸಿದ ಯುವಕನನ್ನು ಮಾರ್ಚ್ 21ರಂದು ಬಜ್ಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಬಂಧಿತನನ್ನು ಕಿನ್ನಿಕಂಬಳ ,ಕಂದಾವರ ಚರ್ಚ್ ರಸ್ತೆಯ ನಿವಾಸಿ ಸಾಹುಲ್ ಹಮೀದ್ (27) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.20ರಂದು ಈ ದೈವಸ್ಥಾನವನ್ನು ಮಲಿನಗೊಳಿಸಲಾಗಿತ್ತು. ಈ ಬಗ್ಗೆ ಸಿಸಿ ಕ್ಯಾಮರಾದ ದೃಶ್ಯಗಳ ಆಧಾರದ ಮೇಲೆ ದೂರು ದಾಖಲಿಸಿದ ಕೇವಲ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾ.20ರಂದು ಭಾನುವಾರ ರಾತ್ರಿ 10.45ಕ್ಕೆ ಸಾಹುಲ್ ಹಮೀದ್ ದೈವಸ್ಥಾನಕ್ಕೆ ಪ್ರವೇಶಿಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ನಂತರ ದೈವಗಳ ಮುಂದೆ ಉರಿಯುತ್ತಿರುವ ದೀಪಗಳನ್ನುಆರಿಸಿ, ಸುಮಾರು 45 ನಿಮಿಷಗಳ ಕಾಲ ಕಳೆದಿದ್ದ. ಬಳಿಕ ದೈವಸ್ಥಾನದ ಒಳಗೆ ರಕ್ತಸಿಕ್ತವಾಗಿದ್ದ ದೃಶ್ಯವೂ ಕಂಡುಬಂದಿತ್ತು.

ಬಜ್ಪೆ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.