ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ‘ವಿ.ಪಿ. ಸಿಂಗ ಸರಕಾರ’ ಸಹಿತ ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಕೂಡ ಹೊಣೆ ! – ಶ್ರೀ. ಲಲಿತ ಅಂಬರದಾಸ್, ಕಾಶ್ಮೀರಿ ಚಿಂತಕ
1990 ರಲ್ಲಿ ಕೇಂದ್ರದಲ್ಲಿ ವಿ.ಪಿ. ಸಿಂಗ್ ಇವರ ಸರಕಾರ ಇರುವಾಗ ಒಂದೇ ದಿನದಲ್ಲಿ ಕಾಶ್ಮೀರಿ ಹಿಂದೂಗಳ ನರಮೇಧವಾಗಿಲ್ಲ, ಆದರೆ ಹಲವು ವರ್ಷಗಳಿಂದ ಅದರ ತಯಾರಿ ನಡೆಯುತ್ತಿತ್ತು. ಮೊದಲು ಹಣ ಪೂರೈಕೆ, ಶಸ್ತ್ರಾಸ್ತ್ರ ತರಬೇತಿ, ಶಸ್ತ್ರಾಸ್ತ್ರ ಪೂರೈಕೆ ಮಾಡಲಾಯಿತು. 1989 ರಲ್ಲಿ ಫಾರೂಕ್ ಅಬ್ದುಲ್ಲಾ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಕಾಂಗ್ರೆಸ್ ಬೆಂಬಲವಿತ್ತು. ಆ ಸಮಯದಲ್ಲಿ, ಕಾಶ್ಮೀರಿ ಹಿಂದೂಗಳ ನಾಯಕ ಟಿಕಾಲಾಲ್ ಟಪಲೂ ಮತ್ತು ನ್ಯಾಯಮೂರ್ತಿ ನೀಲಕಂಠ ಗಂಜು ಸೇರಿದಂತೆ ಅನೇಕರನ್ನು ಅವರು ‘ಹಿಂದೂಗಳು’ ಎಂಬ ಕಾರಣಕ್ಕಾಗಿ ಹತ್ಯೆ ಮಾಡಲಾಯಿತು. ವಾಸ್ತವದಲ್ಲಿ ಜವಾಹರಲಾಲ್ ನೆಹರು ಮತ್ತು ಕಾಂಗ್ರೆಸ್ ಇವು ಕಾಶ್ಮೀರದಲ್ಲಿ ‘ಕಲಂ 370 ಮತ್ತು ‘ಕಲಂ 35 ಎ’ ಜಾರಿಗೊಳಿಸಿದ ನಂತರ ಕಾಶ್ಮೀರದಲ್ಲಿ ಹಿಂದೂಗಳ ನರಮೇಧ ಪ್ರಾರಂಭವಾಗಿತ್ತು. ಆದ್ದರಿಂದ ಕಾಶ್ಮೀರಿ ಹಿಂದೂಗಳ ನರಮೇಧಕ್ಕೆ ಕಾಂಗ್ರೆಸ್ ಪಕ್ಷ, ಫಾರೂಕ್ ಅಬ್ದುಲ್ಲಾ ಅವರ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಅವರ ಪಕ್ಷವೂ ಕಾರಣಕರ್ತರಾಗಿದ್ದಾರೆ, ಎಂದು ಕಾಶ್ಮೀರಿ ಚಿಂತಕ ಮತ್ತು ಅಭ್ಯಸಕರಾದ ಶ್ರೀ. ಲಲಿತ ಅಂಬರದಾಸ್ ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ‘ಸೆಕ್ಯುಲರ್‍ವಾದಿಗಳಿಂದ ‘ದ ಕಾಶ್ಮೀರ ಫೈಲ್ಸ್’ಗೆ ಏಕೆ ವಿರೋಧ ? ಈ ‘ಆನ್‍ಲೈನ್’ ವಿಶೇಷ ಸಂವಾದದಲ್ಲಿ ಭಾಗವಹಿಸಿದ್ದರು. ‘ಕಾಶ್ಮೀರಿ ನರಮೇಧಕ್ಕೆ ಕೇವಲ ‘ವಿ.ಪಿ. ಸಿಂಗ್ ಸರಕಾರ ಮತ್ತು ಅದನ್ನು ಬೆಂಬಲಿಸಿದ ಭಾಜಪ ಕಾರಣಕರ್ತರಾಗಿದ್ದಾರೆಯೇ’, ಈ ಕಾಂಗ್ರೆಸ್‍ನ ಆರೋಪಗಳಿಗೆ ಉತ್ತರಿಸುವಾಗ ಅವರು ಈ ಮೇಲಿನ ಹೇಳಿಕೆ ನೀಡಿದರು. ಈ ರೀತಿಯ ದಾರಿತಪ್ಪಿಸುವ ಅನೇಕ ಆರೋಪಗಳನ್ನು ಖಂಡಿಸುತ್ತಾ ಶ್ರೀ. ಲಲಿತ ಅಂಬರದಾಸ್ ಅವರು ಖಂಡತುಂಡವಾಗಿ ಉತ್ತರಿಸಿದರು.
‘ದಿ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರವು ಮುಸಲ್ಮಾನರ ವಿರುದ್ಧವಾಗಿದ್ದು, ಆ ಸಮಯದಲ್ಲಿ ಹಿಂದೂಗಳು ಮಾತ್ರವಲ್ಲದೆ ಸಾವಿರಾರು ಮುಸಲ್ಮಾನ ಕೊಲ್ಲಲ್ಪಟ್ಟರು ಎಂಬುದರ ಬಗ್ಗೆ ಶ್ರೀ. ಅಂಬರದಾಸ ಇವರು ಉತ್ತರಿಸುತ್ತಾ, 90 ರ ದಶಕದಲ್ಲಿ ಮಸೀದಿಗಳ ಧ್ವನಿವರ್ಧಕಗಳಿಂದಲೇ ಹಿಂದೂಗಳ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿತ್ತು. ‘ಯಹಾ ಚಲೇಗಾ ನಿಜಾಮ್-ಎ-ಮುಸ್ತಫಾ’, ‘ಏ ಹಿಂದೂ ಕಾಶ್ಮೀರ ಛೋಡಕರ ಚಲೆ ಜಾವ’, ‘ಹಿಂದೂಗಳೇ, ನಿಮ್ಮ ಹೆಂಡತಿಯರನ್ನು ಇಲ್ಲೇ ಬಿಟ್ಟು ಹೋಗಿ’ ಎಂಬ ಘೋಷಣೆಗಳನ್ನು ಹಿಂದೂಗಳು ಕೂಗುತ್ತಿದ್ದರೇ ? ಅದೇ ರೀತಿ ಸೈನ್ಯದಲ್ಲಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದ ಫೈಯ್ಯಾಜ್ ಮತ್ತು ಔರಂಗಜೇಬ್ ಅವರಂತಹ ಒಂದು-ಎರಡು ಕಾಶ್ಮೀರಿ ಮುಸಲ್ಮಾನರನ್ನು ಹೊರತುಪಡಿಸಿ, ಹೆಚ್ಚಿನ ಮುಸಲ್ಮಾನರು ಜಿಹಾದ್, ಭಯೋತ್ಪಾದನೆ ಮತ್ತು ಭಾರತವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವಾಗ ಕೊಲ್ಲಲ್ಪಟ್ಟಿದ್ದಾರೆ. ಅವರನ್ನು ಹಿಂದೂಗಳೊಂದಿಗೆ ಎಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಹಾಗೆಯೇ ಕಾಶ್ಮೀರಿ ಮುಸಲ್ಮಾನರು ಅಲ್ಲಿನ ಹಿಂದೂಗಳನ್ನು ರಕ್ಷಿಸಿದ್ದರೆ, ಹಿಂದೂಗಳಿಗೆ ಕಾಶ್ಮೀರದಿಂದ ಸ್ಥಳಾಂತರವಾಗುವ ಪ್ರಮೇಯ ಬರುತ್ತಿರಲಿಲ್ಲ. ಅಂದಿನ ರಾಜ್ಯಪಾಲ ಜಗಮೋಹನ್ ಅವರು ಕಾಶ್ಮೀರಿ ಹಿಂದೂಗಳನ್ನು ಉಳಿಸಲು ಅಕ್ಷರಶಃ ಪ್ರಯತ್ನಿಸಿದ್ದರು. ಆದ್ದರಿಂದಲೇ ಇಂದು ಕಾಶ್ಮೀರ ಭಾರತದಲ್ಲಿದೆ. ಆದ್ದರಿಂದಲೇ ಕಾಂಗ್ರೆಸ್, ಕಮ್ಯುನಿಸ್ಟರು, ಲಿಬರಲ್, ಸೆಕ್ಯುಲರಿಸ್ಟರು ಜಗಮೋಹನ್ ಅವರನ್ನು ನಿರಂತರವಾಗಿ ಗುರಿ ಮಾಡಿ ಅವಮಾನಿಸುತ್ತಿದ್ದಾರೆ; ಆದರೆ ‘ದ ಕಾಶ್ಮೀರ್ ಫೈಲ್ಸ್’ ಈ ಚಲನಚಿತ್ರವು ಕಾಂಗ್ರೆಸ್, ಕಮ್ಯುನಿಸ್ಟ್, ಲಿಬರಲ್ ಮತ್ತು ಸೆಕ್ಯುಲರಿಸ್ಟ್‍ಗಳು 32 ವರ್ಷಗಳಿಂದ ಮುಚ್ಚಿಟ್ಟ ಸತ್ಯವನ್ನು ಜಗತ್ತಿನೆದುರು ತೆರೆದಿಟ್ಟಿದ್ದರಿಂದ ಅವರು ಭಯಭೀತಗೊಂಡಿದ್ದಾರೆ. ಈಗ ಮೋದಿ ಸರಕಾರವು ಕಾಶ್ಮೀರದಲ್ಲಿ ‘ಹಿಂದೂಗಳ ನರಮೇಧವಾಗಿದೆ’ ಎಂಬ ಸತ್ಯವನ್ನು ಸ್ವೀಕರಿಸಿ ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀ. ಅಂಬರದಾಸ ಇವರು ಸಂವಾದದ ಮುಕ್ತಾಯದಲ್ಲಿ ಒತ್ತಾಯಿಸಿದರು.
ತಮ್ಮ ಸವಿನಯ
ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ (ಸಂ : 99879 66666)