Sunday, January 19, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಕದ್ರಿ ದೇವಳದ ಹುಂಡಿ ಹಣಕ್ಕೆ ಕನ್ನ ಹಾಕಿದ ಮಹಿಳಾ ಟ್ರಸ್ಟಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ- ಕಹಳೆ ನ್ಯೂಸ್

ಮಂಗಳೂರು : ಕದ್ರಿ ಮಂಜುನಾಥ ಕ್ಷೇತ್ರದ ಕಾಣಿಗೆ ಹುಂಡಿಗೆ ಸರಕಾರದಿಂದ ನೇಮಕವಾದ ಟ್ರಸ್ಟಿಯೇ ಕನ್ನ ಹಾಕಿರುವ ಘಟನೆ ನಡೆದಿದ್ದು, ಈ ಕೃತ್ಯದ ವಿಡಿಯೋ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ.

ಫೆ 24ರಂದು ದೇವಾಸ್ಥಾನದ ಕಾಣಿಕೆ ಡಬ್ಬಿ ಹಣದ ಲೆಕ್ಕಚಾರ ನಡೆಸಿದ್ದು, ಇದಾಗಿ ಎರಡು ದಿನಗಳ ಬಳಿಕ ಟ್ರಸ್ಟಿಯೊಬ್ಬರಿಗೆ ಅಪರಿಚಿತ ಮಹಿಳೆ ಕರೆ ಮಾಡಿ, 500 ರೂ. ನೋಟುಗಳನ್ನು ಮಹಿಳಾ ಟ್ರಸ್ಟಿ ತನ್ನ ಬ್ಲೌಸ್ ಒಳಗೆ ತುರುಕಿಸುತ್ತಿರುವುದನ್ನು ನಾನು ನೋಡಿದ್ದೇನೆ. ಬೇಕಾದರೆ ಸಿಸಿ ಕ್ಯಾಮಾರ ಪರಿಶೀಲಿಸಿ ಎಂದು ಹೇಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಾದ ಬಳಿಕ ಟ್ರಸ್ಟಿಗಳು ಸೇರಿ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಮಹಿಳಾ ಟ್ರಸ್ಟಿಯೊಬ್ಬರು ನೋಟಿನ ಬಂಡಲ್ ಒಂದನ್ನು ಬ್ಯಾಗ್ ಗೆ ಹಾಕುತ್ತಿರುವುದು ಕಂಡು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ಕುರಿತು ವ್ಯವಸ್ಥಾಪನ ಆಡಳಿತ ಸಮಿತಿ ತುರ್ತು ಸಭೆ ಕರೆದು ವಾದ ವಿವಾದ ನಡೆದ ಬಳಿಕ ಮಹಿಳಾ ಟ್ರಸ್ಟಿ ರಾಜೀನಾಮೆ ನೀಡುವುದಾಗಿ ಒಪ್ಪಿದ್ದರು. ಆದರೆ ವಾರ ಕಳೆದರೂ ರಾಜೀನಾಮೆ ನೀಡದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಸ್ಥಳೀಯರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರು.

ಈ ಬಗ್ಗೆ ಸಚಿವ ವಿ ಸುನೀಲ್ ಕುಮಾರ್ ಪ್ರತಿಕ್ರಿಯಿಸಿ, ಈ ಕುರಿತು ಮಾಹಿತಿ ಬಂದಿಲ್ಲ. ಟ್ರಸ್ಟಿಗಳು ತಪ್ಪು ಮಾಡಿದ್ದು ನಿಜವಾದರೆ ರಕ್ಷಿಸುವ ಪ್ರಮೇಯವೇ ಇಲ್ಲ. ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.