Sunday, January 19, 2025
ಬೆಂಗಳೂರುಸಿನಿಮಾಸುದ್ದಿ

ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ : ಭೂಮಿ ಪೂಜೆ ನೇರವೇರಿಸಿದ ನಟ ವಿನೋದ್ ರಾಜ್ – ಕಹಳೆ ನ್ಯೂಸ್

ಬೆಂಗಳೂರು : ನಟ – ನಟಿಯರು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳೋದು ಅಪರೂಪ. ಆದರೆ ಸ್ಯಾಂಡಲ್ ವುಡ್ ನಲ್ಲಿ ಈ ಸಂಪ್ರದಾಯ ಹಿಂದಿನಿಂದಲೂ ಇದೆ. ಈ ಹಿಂದೆ ಆಸ್ಪತ್ರೆಯೇ ಇಲ್ಲದ ನೆಲಮಂಗಲದ ಹೊರವಲಯದ ಸೋಲದೇವನಹಳ್ಳಿ ಗ್ರಾಮವೊಂದಕ್ಕೆ ಹಿರಿಯ ನಟಿ ಲೀಲಾವತಿ 10 ವರ್ಷದ ಹಿಂದೆ ಸಣ್ಣದೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಿದ್ದರು. ಈಗ ಅದೇ ಗ್ರಾಮದಲ್ಲಿ ಮತ್ತೊಂದು ಆಸ್ಪತ್ರೆ ನಿರ್ಮಾಣಕ್ಕೆ ಲೀಲಾವತಿಯವರು ನಿರ್ಧರಿಸಿದ್ದು ಭೂಮಿಪೂಜೆ ನೆರವೇರಿಸಲಾಗಿದೆ.

ತಮ್ಮ ಕೈಯಲ್ಲಿರೋ ಹಣದಲ್ಲಿ ಆಸ್ಪತ್ರೆ ನಿರ್ಮಾಣ ಸಹಜ. ಆದರೆ ಈಗ ಹಿರಿಯ ನಟಿ ಲೀಲಾವತಿ ತಮ್ಮ ಇಳಿ ವಯಸ್ಸಿನಲ್ಲೂ ಆಸ್ಪತ್ರೆ ನಿರ್ಮಾಣಕ್ಕಾಗಿ ಚೆನ್ನೈನಲ್ಲಿರುವ ಜಮೀನನ್ನು ಮಾರಿ ಹಣ ಸಂಗ್ರಹಿಸಿದ್ದು, ಶ್ವಾಘನೀಯ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಯಿಯ ಆಸೆಗೆ ಕೊಂಚವೂ ಎದುರಾಡದೇ ತಾಯಿಯ ಆಸೆಯನ್ನು ಪೆÇರೈಸಲು ಮುಂದಾಗಿರುವ ನಟ ವಿನೋದ್ ರಾಜ್ ಈಗಾಗಲೇ ಚೈನೈನಲ್ಲಿರೋ ತಮ್ಮ ಜಮೀನ್ ನ್ನು ಮಾರಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದು, ಸೋಲದೇವನಹಳ್ಳಿಯಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಯ ಭೂಮಿಪೂಜೆಯನ್ನು ನಟಿ ಲೀಲಾವತಿಯವರ ಅನುಪಸ್ಥಿತಿಯಲ್ಲಿಯೇ ನೆರವೇರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಥಳೀಯ ಶಾಸಕ ಡಾ. ಶ್ರೀನಿವಾಸ್ ಮೂರ್ತಿ, ನಟಿ ಲೀಲಾವತಿಯವರು ನಿರ್ಮಿಸುತ್ತಿರುವ ಆಸ್ಪತ್ರೆಗೆ ಎಲ್ಲ ಸಹಾಯ ನೀಡೋದಾಗಿ ಘೋಷಿಸಿದ್ದಾರೆ.

ಲೀಲಾವತಿಯವರ ಈ ನಿರ್ಧಾರದಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಖುಷಿಯಾಗಿದ್ದು, ತಮ್ಮ ವೈದ್ಯಕೀಯ ಅಗತ್ಯಗಳಿಗೆ ನೆರವಾಗುತ್ತಿರುವ ಲೀಲಾವತಿಯವರಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.

ಆದರೆ ಹಿರಿಯ ನಟಿ ಲೀಲಾವತಿ ಸ್ಥಳೀಯರಿಗೆ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದರೂ ಸ್ವಂತ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ವಿಫಲರಾಗಿದ್ದು ಲೀಲಾವತಿಯವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಲೀಲಾವತಿಯವರು ಮತ್ತಷ್ಟು ಕುಗ್ಗಿ ಹೋಗಿದ್ದು ಈಗ ಹಾಸಿಗೆಯಲ್ಲೇ ಮಲಗಿಕೊಂಡಿರುವ ಸ್ಥಿತಿಗೆ ತಲುಪಿರುವುದು ವಿಷಾದನೀಯ