ಮಾ. 25ರಂದು ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರ ವಿಕಲಚೇತನರ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ನವೀಕರಣ ಶಿಬಿರ – ಕಹಳೆ ನ್ಯೂಸ್
ಪುತ್ತೂರು : ವಿಕಲ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಮಂಗಳೂರು, ವೆನ್ಲಾಕ್ ಸಾರ್ವಜನಿಕ ಆಸ್ಪತ್ರೆ ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ಸಾರ್ವಜನಿಕ ಆಸ್ಪತ್ರೆ ಬೆಳ್ತಂಗಡಿ, ಕೃಷಿಪತ್ತಿನ ಸಹಕಾರಿ ಬ್ಯಾಂಕ್ ಪದ್ಮುಂಜ, ಸೇವಾ ಸಹಕಾರಿ ಬ್ಯಾಂಕ್ ಬಾರ್ಯ, ಸಾನಿಧ್ಯ ಕೌಶಲ್ಯ ತರಬೇತಿ ಕೇಂದ್ರ ಉಜಿರೆ, ಗ್ರಾಮ ಪಂಚಾಯತ್ ತೆಕ್ಕರೂ, ಗ್ರಾಮ ಪಂಚಾಯತ್ ತಣ್ಣೀರು ಪಂಥ, ಗ್ರಾಮ ಪಂಚಾಯತ್ ಬಂದಾರು, ಗ್ರಾಮ ಪಂಚಾಯತ್ ಮಚ್ಚಿನ, ಗ್ರಾಮ ಪಂಚಾಯತ್ ಇಲಾಂತಿಳ, ಗ್ರಾಮ ಪಂಚಾಯತ್ ಬಾರ್ಯಾ, ಗ್ರಾಮ ಪಂಚಾಯತ್ ಕಳಿಯ, ಗ್ರಾಮ ಪಂಚಾಯತ್ ಕಣಿಯೂರು ಇವರೆಲ್ಲರ ಸಹಯೋಗದಲ್ಲಿ ಮಾ.25ರಂದು ಬೆಳ್ತಂಗಡಿ ತಾಲೂಕು ಕಾಣಿಯೂರು- ಪದ್ಮುಂಜದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರ ಗುರುತಿಸುವಿಕೆ ಹಾಗೂ ಗುರುತಿನ ಚೀಟಿ ನವೀಕರಣ ಶಿಬಿರ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಎಲ್ಲಾ ವಿಕಲಚೇತನರಿಗೆ ಹಾಗೂ ಪೋಷಕರನ್ನು ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ, ಕಣಿಯೂರು, ತಣ್ಣೀರು ಪಂಥ, ಬಂದಾರು, ಮಚ್ಚಿನ, ಕಣಿಯೂರು, ಇಲಾಂತಿಳ, ಬಾರ್ಯಾ, ಕಳಿಯ, ತೆಕ್ಕರೂನ ಎಲ್ಲಾ ಪಿಡಿಒ, ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗದವರು ಆಹ್ವಾನಿಸಿದ್ದಾರೆ.
ವಿಶೇಷ ಸೂಚನೆ:
ಹೊಸ ಗುರುತಿನ ಚೀಟಿ ಅಥವ ನವೀಕರಣ ಮಾಡುವ ಫಲಾನುಭವಿಗಳು ಶಿಬಿರಕ್ಕೆ ಬರುವಾಗ ತರಬೇಕಾದ ದಾಖಲಾತಿಗಳು :-
1) 2 ಪಾಸ್ ಪೋರ್ಟ್ ಫೋಟೋ,
2) ಆಧಾರ್ ಕಾರ್ಡ ಪ್ರತಿ,
3) ರೇಷನ್ ಕಾರ್ಡ್ ಪ್ರತಿ,
4) ಈಗಾಗಲೇ ಗುರುತಿನ ಚೀಟಿ ಹೊಂದಿರುವವರು ಈ ಗುರುತಿನ ಚೀಟಿಯ ಪ್ರತಿಯನ್ನು ಹಾಗೂ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು