Tuesday, December 3, 2024
ಅಂಕಣಪುತ್ತೂರು

ಸೇವೆಗೆ ಸೂಟೆಬಲ್ ಈ ಕಾನ್ಸ್ಟೇಬಲ್! – ಕಹಳೆ ನ್ಯೂಸ್

ಹಗಲಿರುಳೆನ್ನದೆ,ಉಪಚಾರಗಳ ಹಂಗಿಲ್ಲದೆ,ಹಬ್ಬ-ಹರಿದಿನಗಳ ಗುಂಗಿಲ್ಲದೆ ,ಸಂತಸದ ದಿನಗಳನ್ನು ಮರೆತು ಕರ್ತವ್ಯವೇ ದೇವರು ಎಂದು ನಂಬಿ ಕರ್ತವ್ಯ ನಿರ್ವಹಿಸುತ್ತಿರುವ ಗಂಗಾ ನಾಯಕ್ ಸದ್ಯ ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ, ಬಲ್ನಾಡ್ ಗ್ರಾಮದಲ್ಲಿ ಬಿಟ್ ಪೊಲೀಸ್ ಆಗಿಯೂ ಸೇವೆಸಲ್ಲಿಸುತ್ತಿದ್ದಾರೆ

ನಿಷ್ಠಾವಂತ ಕಾನ್ಸ್ಟೇಬಲ್ ವೈಯುಕ್ತಿಕ ಜೀವನದ ಸಂತೋಷದ ಕ್ಷಣಕ್ಕಿಂತ ತನ್ನ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಸದಾಕಾಲ ಕರ್ತವ್ಯ ಪರಿಪಾಲನೆ ಮಾಡುತ್ತಿರುತ್ತಾನೆ ಎನ್ನುವುದಕ್ಕೆ ಗಂಗಾನಾಯಕ್ ಉತ್ತಮ ಉದಾಹರಣೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಊರವರ ಎಲ್ಲರ ಕಷ್ಟಕ್ಕೂ ಮಿಡಿಯುವ ಇವರ ಮನಸ್ಸು ಸದಾ ಊರಿನ ಏಳಿಗೆಗಾಗಿಯೆ ಮಿಡಿಯುತ್ತಿರುತ್ತದೆ. ಇತ್ತೀಚೆಗೆ ಬುಳೇರಿಕಟ್ಟೆ ಜಂಕ್ಷನ್ನಲ್ಲಿ ಸಾರ್ವಜನಿಕರ ಹಿತಕ್ಕಾಗಿ ಅಳವಡಿಸಲಾದ ಸಿಸಿಟಿವಿ ವಿಚಾರದಲ್ಲೂ ಮುಂದಾಳತ್ವ ವಹಿಸಿಕೊಂಡಿದ್ದರು. ದೂರದ ಚಿಕ್ಕಮಗಳೂರಿನವರಾದರೂ ಇದೇ ತನ್ನ ಸ್ವಂತ ಊರು ಎಂದು ನೆನೆದು ಇಲ್ಲಿನ ಸಾಮಾನ್ಯ ವರ್ಗದ ಜನರಿಗೆ ನೆರವಾಗುತ್ತಾರೆ. ಯುವಶಕ್ತಿಯ ಕೈಯಲ್ಲಿ ತನ್ನ ದೇಶ ಊರು ಸುರಕ್ಷಿತ ಎಂದು ಅರಿತ ಇವರು ಊರಿನ ಯುವಕರ ಜೊತೆ ಸಾಮರಸ್ಯದಿಂದಿದ್ದು ಊರಿಗಾಗಿ ಒಳ್ಳೆಯದನ್ನು ಬಯಸುತ್ತಾರೆ.

ಇಂತಹ ನಿಷ್ಠಾವಂತ ಕರ್ತವ್ಯ ಪರಿಪಾಲಕ ಕಾನ್ಸ್ಟೇಬಲ್ ಇರುವುದು ನಮ್ಮೂರಿಗೆ ಹೆಮ್ಮೆ ಮತ್ತು ದೈರ್ಯ!.

 

✍️ಭವಿಷ್ಯತ್ ಹಸಂತಡ್ಕ