Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿಸುಳ್ಯ

ಬೈಕ್- ಜೀಪು ಮಧ್ಯೆ ಭೀಕರ ಅಪಘಾತ: ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವು, ಮತ್ತೋರ್ವನ ಸ್ಥಿತಿ ಗಂಭೀರ –ಕಹಳೆ ನ್ಯೂಸ್

ಸುಳ್ಯ : ಬೈಕ್ ಹಾಗೂ ಜೀಪು ಮಧ್ಯೆ ಭೀಕರ ಅಪಘಾತ ನಡೆದು ಓರ್ವ ಗಾಯಗೊಂಡು ಮತ್ತೋರ್ವ ವಿದ್ಯಾರ್ಥಿ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸುಳ್ಯದ ಕುಂಬಳಚೇರಿ ಎಂಬಲ್ಲಿ ನಡೆದಿದೆ.

ಪೆರಾಜೆಯ ದರ್ಶನ್ ಮತ್ತು ವಿಶ್ವದೀಪ್ ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿಗಳಾಗಿದ್ದು ಇಂದು ಪರೀಕ್ಷೆ ಮುಗಿಸಿ ಇಬ್ಬರು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕುಂಬಳಚೇರಿ ಬಳಿಯ ಗಡಿ ಗುಡ್ಡೆ ಎಂಬಲ್ಲಿ ಎದುರಿನಿಂದ ಬರುತ್ತಿದ್ದ ಜೀಪ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಜೀಪಿಗೆ ಡಿಕ್ಕಿ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವದೀಪ್ ಎಂಬ ವಿದ್ಯಾರ್ಥಿಯ ತಲೆ ಒಡೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರೆ, ದರ್ಶನ್ ಗೆ ತೀವ್ರ ಗಾಯಗಳಾಗಿದೆ. ಕೂಡಲೇ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕಳುಹಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು