Recent Posts

Sunday, January 19, 2025
ಬೆಂಗಳೂರುರಾಜ್ಯಶಿಕ್ಷಣಸುದ್ದಿ

ಪರಿಷ್ಕೃತ ಪಠ್ಯದಲ್ಲಿ ದತ್ತ ಪೀಠದ ಬಗ್ಗೆ ಪಠ್ಯ ; ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್ – ಕಹಳೆ ನ್ಯೂಸ್

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ.

ಈ ಹಿಂದಿನ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣಗೊಂಡಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈಗ ಸಮಿತಿ ಟಿಪ್ಪು ಸುಲ್ತಾನ್ ವೈಭವೀಕರಣಕ್ಕೆ ಬ್ರೇಕ್ ಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

1-10 ನೇ ತರಗತಿವರೆಗಿನ ಕನ್ನಡ ಭಾಷಾ ವಿಷಯಗಳ 15 ಪಠ್ಯಗಳು ಹಾಗೂ ಸಮಾಜ ವಿಜ್ಞಾನದ 7 ಮಾಧ್ಯಮಗಳ ಪಠ್ಯಗಳು ಪರಿಷ್ಕರಣೆ ಪರಿಷ್ಕರಣೆ ನಡೆದಿದೆ. 2 ಮತ್ತು 4 ನೇ ತರಗತಿಗಳ ಪರಿಸರ ಅಧ್ಯಯನ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ಸಮಿತಿ ವರದಿ ಸಲ್ಲಿಕೆ ಮಾಡಿದೆ.

2022-23 ನೇ ಸಾಲಿನಿಂದ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕ ಅಳವಡಿಕೆಗೆ ಸರ್ಕಾರ ನಿರ್ಧಾರ ಮಾಡಿದೆ. ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪಠ್ಯ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕೆಲ ಇತಿಹಾಸ ತಿರುಚಲಾಗಿದೆ ಅಂತ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟಿಪ್ಪು ಸುಲ್ತಾನ್ ಕುರಿತ ತಿರುಚಿದ ಇತಿಹಾಸ ಕೈ ಬಿಡುವಂತೆ ಶಾಸಕ ಅಪ್ಪಚ್ಚು ರಂಜನ್ ಒತ್ತಾಯ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅತಿ ಹೆಚ್ಚು ವರ್ಣರಂಜಿತ, ಮತ್ತು ವೈಭವೀಕರಣದ ಅಂಶಗಳನ್ನು ಕೈಬಿಟ್ಟು ನೂತನ ಪರಿಷ್ಕರಣೆ ಸಮಿತಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ.

ಪರಿಷ್ಕರಣೆಗೊಂಡ ಪಠ್ಯಪುಸ್ತಕದಲ್ಲಿ ಏನಿದೆ?: 
* ಟಿಪ್ಪು ಸುಲ್ತಾನ್ ಪಠ್ಯ ಕೈ ಬಿಟ್ಟಿಲ್ಲ. ರಾಜನಾಗಿ ಟಿಪ್ಪುವಿನ ಇತಿಹಾಸ ಪಠ್ಯದಲ್ಲಿ ಮುಂದುವರಿಕೆ ಮಾಡಲಾಗಿದೆ. ಆದರೆ ಟಿಪ್ಪುವಿನ ಬಗ್ಗೆ ಹೆಚ್ಚು ವೈಭವದ ಮಾಹಿತಿಗೆ ಕತ್ತರಿ ಬಿದ್ದಿದೆ. ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯದಲ್ಲಿ ಹೆಚ್ಚು ವೈಭವೀಕರಿಸಲಾಗಿತ್ತು. ಇದಕ್ಕೆ ರೋಹಿತ್ ಚಕ್ರತೀರ್ಥ ಸಮಿತಿಯಿಂದ ಬ್ರೇಕ್ ಹಾಕಲಾಗಿದೆ.

* ಹಿಂದೂ ಭಾವನೆಗೆ ಧಕ್ಕೆ ತರುವ ಕೆಲ ಅಂಶಗಳ ಪಠ್ಯವನ್ನ ಪರಿಷ್ಕರಣೆ ಮಾಡಲಾಗಿದೆ. ಈಶಾನ್ಯ ಭಾರತದಲ್ಲಿ 600 ವರ್ಷ ಆಳಿದ ಅಹೋಮ್ ಸಾಮ್ರಾಜ್ಯ ಮತ್ತು ಕಾಶ್ಮೀರ ಕಣಿವೆಯನ್ನು 300 ವರ್ಷ ಆಳಿದ ಕಾರ್ಕೋಟ ವಂಶದ ರಾಜರ ಬಗ್ಗೆ ಪಠ್ಯದಲ್ಲಿ ಅಳವಡಿಕೆ ಶಿಫಾರಸು.

* ಬಾಬಾ ಬುಡನ್ ಗಿರಿ ಕುರಿತಾದ ಇತಿಹಾಸಗಳು, ಹಾಗೂ ಬಾಬಾ ಬುಡನ್ ಗಿರಿ ಹೆಸರು ಬದಲಿಗೆ ದತ್ತಪೀಠ ಹೆಸರು ಸೇರ್ಪಡೆಗೆ ಸಮಿತಿಯಿಂದ ಶಿಫಾರಸು.

* ವೈದಿಕ ಧರ್ಮದ ಲೋಪಗಳಿಂದಾಗಿ ಅನೇಕ ಹೊಸ ಧರ್ಮಗಳು ಉದಯವಾಯಿತು ಎಂಬ ಪಠ್ಯದ ಲೋಪವನ್ನು ಸಮಿತಿ ಸರಿಪಡಿಸಿದೆ.

* ಹಿಂದೆ ಯಾಗ-ಯಜ್ಞಗಳನ್ನ ನಡೆಸುವಾಗ ಕೃಷಿಗೆ ಉಪಯೋಗ ಮಾಡುತ್ತಿದ್ದ ಪ್ರಾಣಿಗಳನ್ನು ಬಲಿಕೊಡಲಾಗುತ್ತಿತ್ತು ಎಂಬ ಅಂಶ ಪರಿಷ್ಕರಣೆ ಮಾಡಲಾಗಿದೆ. ದವಸ ಧಾನ್ಯಗಳನ್ನ ಯಜ್ಞ ಕುಂಡದಲ್ಲಿ ಸುಡುತ್ತಿದ್ದರು. ಇದರಿಂದ ಆಹಾರದ ಅಭಾವ ಆಗಿತ್ತು ಎಂಬ ಅಂಶವನ್ನು ಪರಿಷ್ಕರಿಸಲಾಗಿದೆ.

ಸಚಿವರು ಹೇಳಿದ್ದೇನು?: ಪಠ್ಯ ಕ್ರಮದಿಂದ ಟಿಪ್ಪುಸುಲ್ತಾನ್ ವಿಚಾರ ಕೈ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಊಹಾಪೋಹಗಳನ್ನು ಹಾಕಬಾರದು. ಸದ್ಯದಲ್ಲೇ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರವಾಗಿ ಮಾಹಿತಿ ಕೊಡುತ್ತೇನೆ. ಟಿಪ್ಪು ವಿಚಾರವನ್ನ ಪಠ್ಯದಿಂದ ಕೈ ಬಿಡುವ ಸುದ್ದಿ ಸತ್ಯಕ್ಕೆ ದೂರವಾದುದ್ದು, ಒಂದಷ್ಟು ಇತಿಹಾಸದಲ್ಲಿನ ವಿಚಾರಗಳು ಪಠ್ಯ ಪುಸ್ತಕದಿಂದ ಕಡಗಣನೆಯಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ಅದನ್ನು ಸೇರಿಸಲು ಮಾಡಲು ಪ್ರಯತ್ನ ಮಾಡಿದ್ದೇವೆ ಎಂದಿದ್ದಾರೆ.

ಏನೇನು ದೋಷಗಳು ಆಗಿದ್ದವು, ತಾಂತ್ರಿಕ ತಪ್ಪುಗಳು ಆಗಿದ್ದವು ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಇತಿಹಾಸವನ್ನು ತಿರುಚುವ ಪ್ರಯತ್ನ ಆಗಿತ್ತು. ಅದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಮಕ್ಕಳು ಓದಲೇ ಬೇಕಾದ ಪಠ್ಯವನ್ನು ಮತ್ತೆ ತರುವ ಪ್ರಯತ್ನ ಮಾಡಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಬೆರೆಸುವ ಕೆಲಸ ಮಾಡಿಲ್ಲ ಎಂದು ತಿಳಿಸಿದರು.