ಮೂವತ್ತರ ಮುಸ್ಲಿಂ ಆಂಟಿ, ಮದ್ವೆಯಾಗಿದ್ದು ಒಂದಲ್ಲಾ ಮೂರು! ಆದರೂ ನಾಲ್ಕನೆಯವನ ಜೊತೆ ಸಿಕ್ಕಿಬಿದ್ದ ನಿಧಾ ಖಾನ್ ರಂಪಾಟ! – ಕಹಳೆ ನ್ಯೂಸ್
ಮೈಸೂರು: ಆಕೆಯ ವಯಸ್ಸು (Age) ಅಲ್ಲೇ 30ರ ಅಂಚಿನಲ್ಲೇ ನಿಂತುಕೊಂಡು ಬಿಟ್ಟಿದೆ. ನೋಡೋದಕ್ಕೆ ಥೇಟ್ ಸಿನಿಮಾ ಹೀರೋಯಿನ್ನೇ (Cinema Heroine). ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಬೇಕು ಎನಿಸುವಷ್ಟು ಬ್ಯೂಟಿ (Beauty). ಹಾಗಂತ ಅವಳೇನು ಅಮಾಯಕಿಯಲ್ಲ. ಮದುವೆಯಾಗದ ನವ ತರುಣಿಯೂ ಅಲ್ಲ. ಒಂದಲ್ಲ ಅಂತ ಮೂರ್ ಮೂರು ಮದ್ವೆಯಾಗಿದ್ದಾಳೆ (Marriage) ಈ ನಾರಿಮಣಿ. ಸಾಲದ್ದಕ್ಕೆ ನಾಲ್ಕನೆಯವನ ಜೊತೆ ರೆಡ್ ಹ್ಯಾಂಡಾಗಿ (Redhand) ಸಿಕ್ಕಿ ಬಿದ್ದಿದ್ದಾಳೆ. ಇವೆಲ್ಲ ಮೂರನೇ ಗಂಡನಿಗೆ (Husband) ಗೊತ್ತಾಗಿ, ಮನೆಯಲ್ಲಿ ಗಲಾಟೆಯೇ ಆಗಿದೆ. “ಆಗಿದ್ದೆಲ್ಲ ಆಗ್ ಹೋಯ್ತು ಡಿವೋರ್ಸ್ (Divorce) ಕೊಡು” ಅಂದ್ರೂ “ನಾ ನಿನ್ನ ಬಿಡಲಾರೆ” ಅಂತಿದ್ದಾಳೆ. ಇದೀಗ ಈ ಮದನಾರಿಯನ್ನು ಕಟ್ಟಿಕೊಂಡ ಮೂರನೇ ಗಂಡನ ಬದುಕು ಮೂರಾಬಟ್ಟೆಯಾಗಿದೆ.
ಮೂವರನ್ನು ಮದುವೆಯಾದ ಮಹಿಳೆ : ಅಂದ್ಹಾಗೆ ಈಕೆ ಹೆಸರು ನಿಧಾ ಖಾನ್. ಮೈಸೂರಿನ ಉದಯಗಿರಿ ನಿವಾಸಿಯಾಗಿರುವ ಈ ಮಹಿಳೆ ಮೂವರನ್ನು ಮದುವೆಯಾಗಿದ್ದಾಳಂತೆ. ಹೋಗ್ಲಿ ಮೂರನೆಯವನ ಜೊತೆಯಾದ್ರೂ ತೆಪ್ಪಗೆ ಸಂಸಾರ ಮಾಡಬೇಕು ತಾನೇ. ಆದ್ರೆ ಈಕೆ ನಾಲ್ಕನೆಯವನನ್ನೂ ಬಲೆಗೆ ಬೀಳಿಸಿಕೊಳ್ಳಲು ಹೋಗಿದ್ದಾಳೆ.
ಡೇಟಿಂಗ್ ಆ್ಯಪ್ನಲ್ಲಿ ಹುಡುಗರಿಗೆ ಗಾಳ ; ಈ ನಿಧಾ ಖಾನ್ ನೋಡೋದಕ್ಕೆ ಸುರ ಸುಂದರಿ. ಈಕೆ ಒಮ್ಮೆ ಸ್ಮೈಲ್ ಕೊಟ್ಟು, ಕಣ್ಣು ಮಿಟುಕಿಸಿದರೆ ಹುಡುಗರೇ ಹಾರ್ಟ್ ಬೀಟೇ ನಿಂತು ಹೋಗುತ್ತೆ. ಇದನ್ನೆ ಎನ್ಕ್ಯಾಶ್ ಮಾಡಿಕೊಂಡು ಈ ಮಹಿಳೆ, ಟಿಂಡರ್ ಸೇರಿದಂತೆ ಬೇರೆ ಬೇರೆ ಡೇಟಿಂಗ್ ಆ್ಯಪ್ಗಳಲ್ಲಿ ಹುಡುಗರಿಗೆ ಗಾಳ ಹಾಕುತ್ತಾಳೆ. ಮೂರನೆ ಗಂಡ ಪಕ್ಕದಲ್ಲಿರುವಾಗಲೇ ಮೆಸೇಜ್, ಚಾಟಿಂಗ್, ಡೇಟಿಂಗ್, ಕದ್ದು ಮುಚ್ಚಿ ಚೆಲ್ಲಾಟ ಕೂಡ ನಡೆಯುತ್ತಲೇ ಇತ್ತು.
ಡೇಟಿಂಗ್ ಆ್ಯಪ್ ಮೂಲಕವೇ ಮೂರನೇ ಗಂಡನ ಪರಿಚಯ : ಅಂದ್ಹಾಗೆ ಈ ಮೂರನೇ ಗಂಡ ಸಿಕ್ಕಿದ್ದೂ ಕೂಡ ಟೇಂಟಿಂಗ್ ಆ್ಯಪ್ನಲ್ಲೇ ಅ್ಂತೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಈ ಮೂರನೇ ಗಂಡ ಎಚ್ಆರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇದೇ ವೇಳೆ ಟಿಂಡರ್ ಆ್ಯಪ್ ಮೂಲಕ ಪರಿಚಯವಾದ ನಿಧಾ ಖಾನ್ ಗೆ ಮದುವೆ ಪ್ರಪೋಸ್ ಮಾಡಿದ್ದಾನೆ. ಮದುವೆ ಪ್ರಪೋಜಲ್ ಗೆ ಒಪ್ಪಿಕೊಂಡ ನಿಧಾ ಖಾನ್ ನವಂಬರ್ 2019ರಲ್ಲಿ ಮದುವೆಯಾಗಿದ್ದಾರೆ.
ಗಂಡನಿಗೆ ಗೊತ್ತಾಯ್ತು ಮೂರು ಮದುವೆ ವಿಚಾರ : ಮದುವೆ ನಂತ್ರ ನಿಧಾ ಖಾನ್ ಈಗಾಗಲೇ 2 ಮದುವೆ ಆಗಿರುವ ವಿಚಾರ ಈತನಿಗೆ ಗೊತ್ತಾಗಿದೆ. ಈಕೆ 2021ರಲ್ಲಿ ನಗರದ ರಾಜೀವ್ನಗರದ ನಿವಾಸಿಯೊಬ್ಬರ ಜೊತೆ ಮದುವೆಯಾಗಿದ್ದಾಳೆ. ಅದಕ್ಕೂ ಮುನ್ನ ಮತ್ತೊಂದು ಮದುವೆಯಾಗಿದ್ದು, ಅದನ್ನು ತಿಳಿಯದ ಹಾಗೆ ಮುಚ್ಚಿಟ್ಟಿದ್ದಾಳೆ. ನಂತರ ಈ ವಿಚಾರ ಪತಿಗೆ ಗೊತ್ತಾಗಿದೆ. ಬೇರೆ ಪುರುಷರ ಜೊತೆ ಆನ್ಲೈನ್ನಲ್ಲಿ ಮೆಸೇಜ್ ಚಾಟಿಂಗ್ ಮಾಡುವುದು ಮತ್ತು ಮೀಟ್ ಮಾಡುವ ವಿಚಾರವನ್ನು ಪತಿ ತಿಳಿದುಕೊಂಡಿದ್ದಾರೆ.
ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ಮದನಾರಿ : ಈಕೆಯ ನಡವಳಿಕೆ ಬಗ್ಗೆ ಮೂರನೇ ಪತಿಗೆ ಅನುಮಾನ ಬಂದಿದೆ. ಹೀಗಾಗಿ ಆಕೆಯ ಚಲನವಲನದ ಮೇಲೆ ಕೆಲ ದಿನಗಳಿಂದ ಆತ ಒಂದು ಕಣ್ಣಿಟ್ಟಿದ್ದರು. ಕಳೆದ ವಾರ ಮತ್ತೊಂದು ಯುವಕನ ಜೊತೆ ಈ ನಿಧಾ ಖಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳಂತೆ. ಕೂಡಲೇ ಇಬ್ಬರನ್ನೂ ಹಿಡಿದ ಪತಿ, ಅವರನ್ನು ಉದಯಗಿರಿ ಪೊಲೀಸ್ ಠಾಣೆಗೆ ಕರೆತಂದಿದ್ದಾನೆ.
ಡಿವೋರ್ಸ್ ಕೊಡಲಾರೆ, ನಿನ್ನ ಬಿಡಲಾರೆ ಅಂತಿದ್ದಾಳೆ! ಘಟನೆ ಬಳಿಕ ಮದರಾಸದಲ್ಲೂ ಡಿವೋರ್ಸ್ ಬೇಕು ಅಂತಾ ಮುಸ್ಲಿಂ ಮುಖಂಡರನ್ನ ಕೇಳಿದ್ದಾರೆ. ಆದ್ರೆ ಆಕೆ ಡಿವೋರ್ಸ್ ಕೊಡಲ್ಲ ಅಂತಿದ್ದಾಳಂತೆ. ಆಕೆಯಿಂದ ನನಗೆ ಜೀವ ಬೆದರಿಕೆ ಇದೆ. ಡಿವೋರ್ಸ್ ಸಿಕ್ರೆ ಸಾಕಪ್ಪ ಅಂತಾ ಮೂರನೇ ಪತಿ ಇದೀಗ ವಕೀಲರ ಮೊರೆ ಹೊಗಿದ್ದಾನೆ. ಇನ್ನೂ ದೂರು ದಾಖಲಾಗಿದ್ರೂ ಈ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ ಎನ್ನಲಾಗಿದೆ.