Recent Posts

Sunday, January 19, 2025
ಸುದ್ದಿ

ಬೆಂಗಳೂರಿನ ಹವ್ಯಕ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು ‘ಉಚಿತ ವೈದ್ಯಕೀಯ ತಪಾಸಣಾ ಶಿಬಿರ’ – ಕಹಳೆ ನ್ಯೂಸ್

ಬೆಂಗಳೂರು :  ಅಖಿಲ ಹವ್ಯಕ ಮಹಾಸಭೆ(ರಿ) ಬೆಂಗಳೂರು  ಇದರ ವತಿಯಿಂದ ಇಂದು ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ನಾಡಿನ ಸುಪ್ರಸಿದ್ದ ವೈದ್ಯರಿಂದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮಲ್ಲೇಶ್ವರದಲ್ಲಿರುವ ಹವ್ಯಕ ಮಹಾಸಭೆಯ ಸಭಾಭವನದಲ್ಲಿ ಇಂದು ಬೆಳಗ್ಗೆ 10.00 ರಿಂದ ಶಿಬಿರ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸಿದ್ಧ ಹೃದಯ ತಜ್ಞ ಡಾ. ದಿವಾಕರ್ ಭಟ್ , ಡಾ. ರವಿಶಂಕರ್, ಡಾ. ಬಿ ಎಸ್ ಭಟ್,  ಡಾ. ಅರುಣ್ ಅಡಕ್ಕೋಳಿ, ಡಾ. ಬಾಲಮುರಳಿ,  ಡಾ. ಪ್ರಭಾಕರ್ ಅಲಗೋಡು,  ಡಾ. ಎಸ್ ಆರ್ ಹೆಗಡೆ ಹಾಗೂ ಮಹಾಸಭೆಯ ಅಧ್ಯಕ್ಷರು ಹಾಗೂ ಪ್ರಸಿದ್ದ ವೈದ್ಯರಾದ  ಡಾ. ಗಿರಿಧರ್ ಕಜೆ ಸೇರಿದಂತೆ ಹಲವಾರು ಪ್ರಸಿದ್ಧ ವೈದ್ಯರ ತಂಡ ಕಣ್ಣಿನ ತೊಂದರೆ, ಹೃದಯ ಸಮಸ್ಯೆ, ದಂತ ಪರೀಕ್ಷೆ, ಚರ್ಮವ್ಯಾಧಿ, ಸ್ತ್ರೀರೋಗ, ಕ್ಯಾನ್ಸರ್, ಸಂಧು ನೋವು, ಬೆನ್ನು ನೋವು, ಅರೆ ತಲೆನೋವು ಸೇರಿದಂತೆ ಎಲ್ಲ ಬಗೆಯ ರೋಗಗಳಿಗೆ ಅಲೋಪತಿ – ಹೋಮಿಯೋಪತಿ ಹಾಗೂ ಆಯುರ್ವೇದ ವೈದ್ಯಪದ್ದತಿಯಲ್ಲಿ ಪರೀಕ್ಷೆ  ಮಾಡಿ ಚಿಕಿತ್ಸೆಗೆ ಮಾರ್ಗದರ್ಶನ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು


ಸರ್ವಸಮಾಜದ ಹಿತಕ್ಕಾಗಿ ಹವ್ಯಕ ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿ ಈ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿದ್ದು, ಕರ್ನಾಟಕ ಕ್ಯಾನ್ಸರ್ ಸೊಸೈಟಿ, ಸುನೇತ್ರ ಕಣ್ಣಿನ ಆಸ್ಪತ್ರೆ ಹಾಗೂ ಟೊರ್ರೆಂಟ್ ಫಾರ್ಮ ಇವರುಗಳ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ 250 ಜನ ಪಾಲ್ಗೊಂಡು ಪ್ರಯೋಜನ ಪಡೆದರು.

ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ ಕಜೆ ಹಾಗೂ ಮಹಾಸಭೆಯ ವೈದ್ಯಕೀಯ ಹಾಗೂ ಆರೋಗ್ಯ ಸಮಿತಿಯ ಸಂಚಾಲಕರಾದ ಡಾ. ಶ್ರೀಪಾದ್ ಹೆಗಡೆ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿಗಳಾದ ಪ್ರಶಾಂತ ಭಟ್ ಮಳವಳ್ಳಿ ಎಲ್ಲ ವೈದ್ಯರಿಗೆ ಹಾಗೂ ಸಹಕಾರ ನೀಡಿದವರಿಗೆ ಧನ್ಯವಾದ ಸಮರ್ಪಿಸಿದರು. ಮಹಾಸಭೆಯ ಪದಾಧಿಕಾರಿಗಳು, ಸಂಚಾಲಕರು ಉಪಸ್ಥಿತರಿದ್ದರು.