Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜ್ಯವಾಣಿಜ್ಯಸುದ್ದಿ

ಪುತ್ತೂರು ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯಲ್ಲಿ ಕರ್ನಾಟಕದ ಪ್ರಪ್ರಥಮ ಹೈಬಯೋಮ್ ಎಇ ೧೮೦ ಉಪಕರಣದ ಅಳವಡಿಕೆ ; ಮಾ.30-31ರಂದು ನೇರ ಪ್ರಾತ್ಯಕ್ಷಿಕೆ ಹಾಗೂ ಥೈರಾಡ್ ತಪಾಸಣೆಗೆ 50% ರಿಯಾಯಿತಿ – ಕಹಳೆ ನ್ಯೂಸ್

ಪುತ್ತೂರು: ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗು ಅಸಂಖ್ಯಾತ ಜನರ ನಂಬಿಕೆಯ ಪುತ್ತೂರಿನ ಚೇತನ್ ಪ್ರಕಾಶ್ ಕಜೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ದರ್ಬೆ, ಬೊಳ್ವಾರು, ಸುಳ್ಯ, ಮಾಡಾವು, ಈಶ್ವರಮಂಗಲ ಮತ್ತು ವಿಟ್ಲದಲ್ಲಿ ಶಾಖೆಗಳನ್ನು ಹೊಂದಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಪುತ್ತೂರು ಪ್ರಧಾನ ಸಂಸ್ಥೆಯಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಅಳವಡಿಕೆಯಾದ ನೂತನ ಉಪಕರಣ ‘ಹೈಬಯೋಮ್ ಎಇ ೧೮೦ ಸಹಿತ ಇತರ ಉಪಕರಣಗಳ ನೇರ ಪ್ರಾತ್ಯಕ್ಷಿತೆಗೆ ಮಾ.30-31ರಂದು ಅವಕಾಶ ಕಲ್ಪಿಸಲಾಗಿದೆ.

ಹೊಸ ಹೊಸ ವಿದೇಶಗಳಿಂದ ಆಮದಿತ ಅತ್ಯಾಧುನಿಕ ತಂತ್ರಜ್ಞಾನದಿಂದ ಪಾರದರ್ಶಕ ಸೇವೆ :

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ದರ್ಬೆ ಧನ್ವಂತರಿ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧನ್ವಂತರಿ ಲ್ಯಾಬೋರೇಟರಿ ಸಂಸ್ಥೆಯು ರಕ್ತ ತಪಾಸಣೆಯಲ್ಲಿ ಹಲವು ಹೊಸ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, _ರಕ್ತಪರೀಕ್ಷಾ ಇತಿಹಾಸದಲ್ಲೇ ಹೊಸ ಆಯಾಮವನ್ನೇ ಸೃಷ್ಟಿಸಿ ದಕ್ಷಿಣಕನ್ನಡದ ಎರಡನೇ ಅತೀದೊಡ್ಡ ಲ್ಯಾಬೋರೇಟರಿ ಎಂಬ ಹೆಗ್ಗಳಿಕೆ ಪಡೆದಿದೆ. ದಿನದ ೨೪ ಗಂಟೆ ವಾರದ ೭ ದಿನಗಳ ನಿರಂತರ, ನಿಖರ, ತ್ವರಿತ, ಪಾರದರ್ಶಕ ಸೇವೆಯಿಂದ ವೈದ್ಯರ, ಅಸಂಖ್ಯಾತ ಜನರ ಪ್ರಶಂಸೆಗೆ ಪಾತ್ರವಾಗಿದೆ. ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದ ಉಪಕರಣಗಳಿಂದ ಫಲಿತಾಂಶ, ಫಲಿತಾಂಶದ ಗುಣಮಟ್ಟವನ್ನು ಕಾಯ್ದಿರಿಸಿಕೊಲ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಉಪಕರಣಗಳಲ್ಲಿ ಇಂಟರ್ನಲ್ ಕ್ವಾಲಿಟಿ ಚೆಕಿಂಗ್‌ನ ಅಳವಡಿಕೆ ಹಾಗು ಎಕ್ಸ್‌ಟರ್ನಲ್ ಕ್ವಾಲಿಟಿ ಚೆಕಿಂಗ್ (ರಾಂಡಾಕ್ ಡಯಾಗ್ನೋಸ್ಟಿಕ್ ಇಂಗ್ಲೆಂಡ್ ಇದರ ಸಹಭಾಗಿತ್ವದೊಂದಿಗೆ), ಲಿಪಿಡ್ ಪ್ರೊಫೈಲ್, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ನೊಂದಿಗೆ ವಿಟ್ಲ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಡೈರೆಕ್ಟ್ ಹೆಚ್‌ಡಿಎಲ್ ಹಾಗು ಡೈರೆಕ್ಟ್ ಎಲ್‌ಡಿಎಲ್‌ನ ಅಳವಡಿಕೆ, ಮೈಕ್ರೋಬಯೋಲಜಿಯಲ್ಲಿ ಅಟೋಮೇಷನ್ ಅಳವಡಿಸಿದ ದಕ್ಷಿಣ ಕನ್ನಡದ ೨ನೇ ಸಂಸ್ಥೆ, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನೀವಿರುವಲ್ಲೇ ೫ ನಿಮಿಷದಲ್ಲಿ ಬ್ಲಡ್‌ಗ್ಯಾಸ್ ತಪಾಸಣೆ, ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಮೆಟ್ರೋ ಸಿಟಿಗಳಲ್ಲಿ ಲಭ್ಯವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪುತ್ತೂರಿಗೆ ಪರಿಚಯಿಸಿದ ಹೆಗ್ಗಳಿಕೆಯೊಂದಿಗೆ ಅನುಭವಿ ಹಾಗೂ ವೃತ್ತಿಪರ ಸಿಬ್ಬಂದಿಗಳು ಸಂಸ್ಥೆಯಲ್ಲಿ ಉತ್ತಮ ಸೇವೆ ನೀಡುತ್ತಿದ್ದಾರೆ.

ಮಾ.೩೦, ೩೧ಕ್ಕೆ ರಿಯಾಯಿತಿಯಲ್ಲಿ ಥೈರಾಡ್ ತಪಾಸಣೆ

ಸಂಸ್ಥೆಗೆ ಬಯೋಮೆರಿಕ್ಸ್ ಮತ್ತು ಧನ್ವಂತರಿ ಲ್ಯಾಬೋರೇಟರಿ ಸಹಯೋಗದೊಂದಿಗೆ ಫ್ರಾನ್ಸ್‌ನಿಂದ ಆಮದಿತ ಈ ಉಪಕರಣ ರಾಜ್ಯದಲ್ಲೇ ಪ್ರಪ್ರಥಮವಾಗಿ ಪುತ್ತೂರಿನಲ್ಲಿ ಅಳವಡಿಕೆ ಪ್ರಯುಕ್ತ ಮಾ._30-31ರಂದು ಥೈರಾಡ್ ತಪಾಸಣೆ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ಕೇವಲ ರೂ. ೨೫೦ರಲ್ಲಿ ತಪಾಸಣೆ ಮಾಡಿಸಿಕೊಳ್ಳಬಹುದು. ಇದರ ಜೊತೆಗೆ ರೀತಿ ವಿವಿಧ ರಕ್ತಪರೀಕ್ಷಾ ಪ್ಯಾಕೇಜ್‌ಗಳ ಮೇಲೆ ಶೇ.೨೫ರ ತನಕ ರಿಯಾಯಿತಿಯನ್ನು ನೀಡಲಾಗುತ್ತದೆ ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಮ್ಯಾನೇಜಿಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ಕಜೆ ರವರು ತಿಳಿಸಿದ್ದಾರೆ.