Recent Posts

Monday, January 20, 2025
ಸುದ್ದಿ

ಉಕ್ರೇನ್-ರಷ್ಯಾ ನಡುವಿನ ಸಂಧಾನ ಯಶಸ್ವಿ – ಕಹಳೆ ನ್ಯೂಸ್

ISTANBUL, March 29, 2022 (UNI/Xinhua) -- Turkish President Recep Tayyip Erdogan (C) meets with Russian and Ukrainian delegations before a fresh round of face-to-face peace talks in Istanbul, Turkey, March 29, 2022. Russia and Ukraine have concluded their fresh round of face-to-face peace talks here on Tuesday, which lasted for approximately three hours, according to media reports. Before the meeting, Turkish President Recep Tayyip Erdogan said the time had come for talks to yield concrete results. The Turkish leader called for an immediate ceasefire and said a prolonged conflict is not in anyone's interest. UNI PHOTO-11F

ಉಕ್ರೇನ್ : ಕೊನೆಗೂ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ದ ಮುಗಿಯುವ ಹಂತಕ್ಕೆ ತಲುಪಿದ್ದು, ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದ ಸಂಧಾನ ಯಶಸ್ವಿಯಾಗಿದ್ದು, ಉಕ್ರೇನ್ ರಾಜಧಾನಿ ಕೈವ್ ಸುತ್ತಮುತ್ತ, ಉತ್ತರ ಉಕ್ರೇನ್‌ನಲ್ಲಿ ರಷ್ಯಾ ತನ್ನ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ’ ಕಡಿಮೆ ಮಾಡಲಿದೆ ಎಂದು ಮಾಸ್ಕೋದ ಸಂಧಾನಕಾರರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದ ಉಭಯ ರಾಷ್ಟ್ರಗಳ ನಾಯಕರ ಮಾತುಕತೆ ಫಲಪ್ರದವಾಗಿದ್ದು ರಷ್ಯಾದೊಂದಿಗಿನ ಸಂಘರ್ಷವನ್ನು ಪರಿಹರಿಸಲು ಟರ್ಕಿಯಲ್ಲಿ ಮಂಗಳವಾರ ನಡೆದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇಂದಿನ ಸಭೆಯ ಫಲಿತಾಂಶಗಳು ಉಭಯ ದೇಶಗಳ ಅಧ್ಯಕ್ಷರ ಸಭೆಗೆ ಮುನ್ನುಡಿ ಬರೆದಿವೆ ಎಂದು ಉಕ್ರೇನಿಯನ್ ಸಮಾಲೋಚಕ ಡೇವಿಡ್ ಅರಾಖಮಿಯಾ ಹೇಳಿದರು.

ಉಕ್ರೇನ್‌ನ ತಟಸ್ಥತೆ ಮತ್ತು ಪರಮಾಣು-ಅಲ್ಲದ ಸ್ಥಿತಿಯ ಕುರಿತು ಒಪ್ಪಂದವನ್ನು ಸಿದ್ಧಪಡಿಸುವ ಮಾತುಕತೆಗಳು ಪ್ರಾಯೋಗಿಕ ಕ್ಷೇತ್ರಕ್ಕೆ ಸ್ಥಳಾಂತರಗೊ0ಡಿವೆ. ಕೈವ್ ಮತ್ತು ಪ್ರದೇಶಗಳಲ್ಲಿ ಮಿಲಿಟರಿ ಚಟುವಟಿಕೆಯನ್ನು ಆಮೂಲಾಗ್ರವಾಗಿ ಕಡಿಮೆ ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ರಷ್ಯಾದ ಉಪ ರಕ್ಷಣಾ ಸಚಿವ ಅಲೆಕ್ಸಾಂಡರ್ ಫೋಮಿನ್ ಹೇಳಿದರು.

ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯುವ ಉದ್ದೇಶದಿಂದ ಹಿಂದೆ ಸರಿದಿದೆ. ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ನಡೆಸೋ ಸಾಧ್ಯತೆಯಿದೆ.