Sunday, January 19, 2025
ಸುದ್ದಿ

ಮನೆ ದುರಸ್ತಿ ಮಾಡಿಕೊಡುವುದಾಗಿ ಸಂತ್ರಸ್ತೆಗೆ ಅಶೋಕ್ ಕುಮಾರ್ ರೈ ಅಭಯ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಕಸಬಾ ಆನಂದಾಶ್ರಮ ಬಳಿಯ ಸಿಂಹವನ ನಿವಾಸಿ ಕಮಲ ಎಂಬುವವರ ಮನೆಯು ಗಾಳಿ, ಮಳೆಗೆ ಕುಸಿದು ಬಿದ್ದಿದ್ದು, ವಿಷಯ ತಿಳಿದು ಕಮಲ ಅವರ ಮನೆಗೆ ಭೇಟಿ ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ಮನೆ ದುರಸ್ತಿಗೆ ಬೇಕಾದ ಬ್ಲಾಕ್, ಸಿಮೆಂಟ್ ಶೀಟ್ ಒದಗಿಸಿ ಮನೆ ದುರಸ್ತಿ ಮಾಡಿಕೊಡುವುದಾಗಿ ಅಶೋಕ್​ ಕುಮಾರ್​ ರೈ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಸ್ಥಳೀಯ ನಗರಸಭಾ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ, ದೇವರಾಜ ಸಿಂಹವನ ಉಪಸ್ಥಿತರಿದ್ದರು.