Monday, January 20, 2025
ಹೆಚ್ಚಿನ ಸುದ್ದಿ

ಒಂದೇ ದೇಹ, ಎರಡು ತಲೆ ಹೊಂದಿದ ಅಪರೂಪದ ಅವಳಿ ಶಿಶು ಜನನ – ಕಹಳೆ ನ್ಯೂಸ್

ಕೆಲವೊಮ್ಮೆ ಗರ್ಭದಲ್ಲಿ ಅವಳಿ ಮಕ್ಕಳು ಬೆಳೆಯುತ್ತಿವೆ ಎಂದು ವೈದ್ಯರು ಹೇಳಿದಾಗ, ತಾಯಿಯಾಗುವವಳು ತುಂಬಾನೇ ಜಾಗ್ರತೆಯನ್ನು ವಹಿಸಬೇಕಾಗುತ್ತದೆ. ಈಗಂತೂ ‘ಮಕ್ಕಳು ಆರೋಗ್ಯವಾಗಿ ಹುಟ್ಟಿದರೆ ಸಾಕಪ್ಪಾ ದೇವರೇ’ ಅಂತ ಪೋಷಕರಾಗುವವರು ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಆದರೆ ಇಲ್ಲಿ ಮಹಿಳೆಯೊಬ್ಬಳು ಎರಡು ತಲೆಗಳು ಎರಡು ಹೃದಯಗಳು ಮತ್ತು ಮೂರು ಕೈಗಳಿರುವ ಅವಳಿ ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ರತ್ಲಾಮ್ ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಹೀನ್ ಮತ್ತು ಆಕೆಯ ಪತಿ ಸೋಹೇಲ್ ಇಬ್ಬರು ಆರೋಗ್ಯವಾಗಿರುವ ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದರು. ಆದರೆ ಮಾರ್ಚ್ 28 ರಂದು ಹುಟ್ಟಿದ ಈ ಮಗುವಿಗೆ ಎರಡು ತಲೆಗಳನ್ನು ಇರುವುದನ್ನು ನೋಡಿ ದಂಪತಿ ಆಘಾತಕ್ಕೊಳಗಾದರು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಗವನ್ನು ಇಂಧೋರ್ ನಲ್ಲಿರುವ ಯಶ್ವಂತ್ ರಾವ್ ಆಸ್ಪತ್ರಗೆ ದಾಖಲಿಸಲಾಗಿದ್ದು, ಮಗು ವೆಂಟಿಲೇಟರ್ ಸೌಲಭ್ಯದಿಂದ ಉಸಿರಾಡುತ್ತಿದೆ ಎಂದು ವೈದ್ಯ ರಾಜೇಶ್ ಲಹೋಟಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು