Recent Posts

Wednesday, November 13, 2024
ಸುದ್ದಿ

ಚೀನಾ ರಸ್ತೆ ಯೋಜನೆ ತಿರಸ್ಕಾರ ; ಭಾರತದ ದಿಟ್ಟ ನಿರ್ಧಾರ – ಕಹಳೆ ನ್ಯೂಸ್

Narendra Modi, prime ministerial candidate for Bharatiya Janata Party (BJP) and Gujarat's chief minister, addresses his supporters during a rally in Amroha, Uttar Pradesh March 29, 2014. REUTERS/Adnan Abidi

ಚೀನಾ : ಐರೋಪ್ಯ ರಾಷ್ಟ್ರಗಳನ್ನು ಏಷ್ಯಾ ರಾಷ್ಟ್ರಗಳೊಂದಿಗೆ ಬೆಸೆಯುವ ಚೀನಾದ ಮಹತ್ವಾಕಾಂಕ್ಷಿ ಅರ್ಥಿಕ ಕಾರಿಡಾರ್ ಯೋಜನೆಯಾದ ಬೆಲ್ಟ್ ಆಂಡ್ ರೋಡ್ ಅನ್ನು ಭಾರತ ಮತ್ತೊಮ್ಮೆ ತಿರಸ್ಕರಿಸಿ ಚೀನಾಗೆ ಟಾಂಗ್ ನೀಡಿದೆ.

ಈ ಯೋಜನೆಯಡಿ ಪಾಕ್ ಅಕ್ರಮಿತ ಕಾಶ್ಮೀರ ಮೂಲಕ ರಸ್ತೆ ಹಾದು ಹೋಗುತ್ತದೆ ಎಂಬ ಕಾರಣಕ್ಕಾಗಿ ಭಾರತ ಆರಂಭದಿಂದಲೂ ಇದನ್ನು ವಿರೋಧಿಸುತ್ತಲೇ ಬಂದಿದೆ. ಎಸ್ ಸಿ ಒ ಶೃಂಗದಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಬೃಹತ್ ಸಂಪರ್ಕ ಯೋಜನೆಗಳು ದೇಶದ ಸರ್ವ ಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಎತ್ತಿಹಿಡಿಯಬೇಕು. ಈ ಅಂಶವನ್ನು ಒಳಗೊಂಡಿರುವ ಯಾವುದೇ ಯೋಜನೆಯನ್ನು ಭಾರತ ಬೆಂಬಲಿಸುತ್ತದೆ ಎಂದು ಚೀನಕ್ಕೆ ಟಾಂಗ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಂಘೈ ಸಹಕಾರ ಸಂಘಟನೆಯ ಸಮ್ಮೇಳನದಲ್ಲಿ ಈ ಯೋಜನೆ ಒಪ್ಪಿಕೊಳ್ಳದೇ ಇರುವ ದಿಟ್ಟ ನಿರ್ಧಾರ ಕೈಗೊಂಡಿದ್ದು ಭಾರತ ಮಾತ್ರ . ಉಳಿದಾಂತೆ ರಷ್ಯಾ, ಪಾಕಿಸ್ತಾನ ಸಹಿತ ಹಲವು ದೇಶಗಳು ಈ ಯೋಜನೆಗೆ ಬೆಂಬಲ ಘೋಷಿಸಿದೆ. ಚೀನಾ ಈ ಯೋಜನೆಗೆ ಒಟ್ಟು 80 ದೇಶ ಹಾಗೂ ಸಂಸ್ಥೆಗಳ ಸಹಭಾಗಿತ್ವವನ್ನು ಸಾಧಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು