Tuesday, January 21, 2025
ಸಿನಿಮಾಸುದ್ದಿ

ಅಮಿತಾಬ್ ಗೆ ಶಾಕ್ ಕೊಟ್ಟ ನ್ಯಾಷನಲ್ ಕ್ರಶ್: ಬಿಗ್ ಬೀ ಎದುರು ತಲೆಬಾಗಲ್ಲ ಎಂದ ರಶ್ಮಿಕಾ ಮಂದಣ್ಣ – ಕಹಳೆ ನ್ಯೂಸ್

ನ್ಯಾಶನಲ್ ಕ್ರಶ್ ಎನ್ನಿಸಿಕೊಂಡಿರೋ ನಟಿ ರಶ್ಮಿಕಾ ಮಂದಣ್ಣ ಪುಷ್ಪ ಗೆಲುವಿನ ಬೆನ್ನಲ್ಲೇ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ಬಾಲಿವುಡ್ ಸಿನಿಮಾದಲ್ಲಿ ಸಖತ್ ಮಿಂಚುತ್ತಿದ್ದಾರೆ. ಮಿಶನ್ ಮಜ್ನು ರಶ್ಮಿಕಾರ ಚೊಚ್ಚಲ ಬಾಲಿವುಡ್ ಸಿನಿಮಾ ರಿಲೀಸ್ ಗೂ ಮುನ್ನವೇ ಎರಡನೇ ಸಿನಿಮಾ ಗುಡ್ ಬೈ ರಶ್ಮಿಕಾರ ಪ್ರತಿಭೆಗೆ ಅವಕಾಶ ನೀಡಿದೆ.

ಈ ಮಧ್ಯೆ ಅಮಿತಾಬ್ ಬಚ್ಚನ್ ರಶ್ಮಿಕಾ ಜೊತೆ ಸೆಟ್ ನಲ್ಲಿ ತೆಗೆದ ಪೋಟೋವೊಂದನ್ನು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊAಡಿದ್ದು, ರಶ್ಮಿಕಾ ಜೋತೆ ಪೋಟೋ ಕ್ಲಿಕಿಸಿದ್ದರಿಂದ ಬಿಗ್ ಬೀ ಅದಕ್ಕೆ ಪುಷ್ಪಾ ಎಂದು ಹೆಡ್ಡಿಂಗ್ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುಷ್ಪ ಎಂಬ ಕ್ಯಾಪ್ಸನ್ ನೀಡಲಾದ ಈ ಪೋಸ್ಟ್ ಗೆ Sir Hum #jhukengenahi…. (ಸರ್ ನಾವು ತಲೆಬಾಗಲ್ಲ) ಎಂದು ರಶ್ಮಿಕಾ ಕಮೆಂಟ್ ಮಾಡಿದ್ದಾರೆ. ಇಷ್ಟಕ್ಕೂ ರಶ್ಮಿಕಾ ಅಮಿತಾಬ್ ಬಚ್ಚನ್ ರಂತಹ ಹಿರಿಯ ನಟರ ಬಗ್ಗೆ ಸರ್ ನಾವು ತಲೆಬಾಗಲ್ಲ ಎಂದು ಕಮೆಂಟ್ ಮಾಡಿರುವ ಅಸಲಿ ಸತ್ಯ ಏನೆಂದರೇ, ಇದು ಪುಷ್ಪ ಸಿನಿಮಾದ ಫೇಮಸ್ ಡೈಲಾಗ್ ಆಗಿದೆ.

ರಶ್ಮಿಕಾ ಹಾಗೂ ಅಮಿತಾಬ್ ನಡುವಿನ ಈ ಸಂಭಾಷಣೆ ಹಾಗೂ ಕಮೆಂಟ್ ನ್ನು ಲಕ್ಷಾಂತರ ಜನರು ಲೈಕ್ ಮಾಡಿದ್ದರೇ ಸಾವಿರಾರು ಜನರು ಕಮೆಂಟ್ ಮಾಡಿದ್ದಾರೆ.