Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂಬಿಕಾದಲ್ಲಿ ಹೊಸ ವರ್ಷಾಚರಣೆ, ಭಾರತೀಯ ದಿನದರ್ಶಿಕೆ ಲೋಕಾರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಂದು ದೇಶಕ್ಕೂ ಅದರದ್ದೇ ಆದ ಗುಣವಿಶೇಷಗಳಿರುತ್ತವೆ. ಅಂತೆಯೇ ಭಾರತಕ್ಕೆ ಸಂಬಂಧಿಸಿದಂತೆ ಗುರುತಿಸಬಹುದಾದ ವಿಶಿಷ್ಟ ವಿಚಾರವೆಂದರೆ ಆಧ್ಯಾತ್ಮಿಕತೆ. ನಮ್ಮ ರಾಷ್ಟ್ರವನ್ನು ಆಧ್ಯಾತ್ಮಿಕ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದೆ. ಆ ನೆಲೆಯಲ್ಲಿಯೇ ಯುಗಾದಿಯ ನೂತನ ವರ್ಷದ ದಿನವನ್ನು ಧಾರ್ಮಿಕ ದಿನಾಚರಣೆಯನ್ನಾಗಿ ಸರ್ಕಾರ ಘೋಷಣೆ ಮಾಡಿದೆ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಲಾದ ‘ಯುಗಾದಿ ಹೊಸವರ್ಷ – ಧಾರ್ಮಿಕ ದಿನಾಚರಣೆ, ಭಾರತೀಯ ದಿನದರ್ಶಿಕೆಯ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಒಂದು ಹಂತದಲ್ಲಿ ನಾವು ವಿದೇಶೀ ಸಂಸ್ಕøತಿಗೆ ಮಾರುಹೋಗಿದ್ದೆವು. ಆದರೆ ಈಗೀಗ ಮತ್ತೆ ದೇಸೀಯ ವಿಚಾರಧಾರೆಗಳೆಡೆಗೆ ನಮ್ಮ ಜನಸಮೂಹ ಮರಳಿಬರುತ್ತಿರುವುದು ಸ್ವಾಗತಾರ್ಹ ವಿಚಾರ. ಭಾರತದಲ್ಲಿ ಇರುವಷ್ಟು ಶಾಂತಿ, ನೆಮ್ಮದಿಗಳು ಮತ್ತಾವ ದೇಶದಲ್ಲೂ ಇಲ್ಲ. ರಾಮಾಯಣ, ಮಹಾಭಾರತದಂತಹ ಕಾಲಘಟ್ಟದಿಂದ ತೊಡಗಿದಂತೆ ಆವಿರ್ಭವಿಸಿದ ಅವತಾರಪುರುಷರಿಂದಾಗಿ ನಮ್ಮ ನೆಲದಲ್ಲಿ ಪ್ರಶಾಂತತೆ ಮನೆಮಾಡಿದೆ. ಪರಿಣಾಮವಾಗಿ ಅಮೇರಿಕಾದಂತಹ ರಾಷ್ಟ್ರಗಳಲ್ಲೂ ಭಾರತದ ಅವತಾರ ಪುರುಷರನ್ನು ಆರಾಧಿಸುವ, ನೆಮ್ಮದಿಗಾಗಿ ಭಗವಾನ್ ಶ್ರೀಕೃಷ್ಣನನ್ನು ಭಜಿಸುವ ಕಾರ್ಯ ನಡೆಯುತ್ತಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಗರದ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‍ನ ಆಡಳಿತ ನಿದೇಶಕ ಬಲರಾಮ ಆಚಾರ್ಯ ಮಾತನಾಡಿ ಪ್ರತಿಯೊಬ್ಬರೂ ಭಾರತೀಯತೆಯನ್ನು ಪ್ರಸಾರ ಮಾಡಬೇಕು. ಸಂಸ್ಕøತಿ-ಸಂಸ್ಕಾರಗಳ ಪ್ರಚಾರ ನಿರಂತರವಾಗಿ ಜಾರಿಯಲ್ಲಿರಬೇಕು. ಇಂಗ್ಲಿಷ್ ಕ್ಯಾಲೆಂಡರ್ ಬದಲಾಗಿ ಭಾರತೀಯ ದಿನದರ್ಶಿಕೆ ಮನೆ ಮನಗಳನ್ನು ತಲಪುವಂತಾಗಬೇಕು ಎಂದು ಕರೆನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಹಿಂದೆಂದೂ ಕಾಣದಿದ್ದ ಭಾರತೀಯತೆಯ ಪ್ರವಾಹ ಇದೀಗ ಧುಮ್ಮಿಕ್ಕಿ ಹರಿಯುತ್ತಿದೆ. ಈ ಪ್ರವಾಹದೆದುರು ದುಷ್ಟಶಕ್ತಿಗಳು ನೆಲೆನಿಲ್ಲಲಾರದೆ ಕೊಚ್ಚಿಹೋಗುತ್ತಿವೆ. ಧಾರ್ಮಿಕ ದಿನಾಚರಣೆ ಘೋಷಣೆ, ರಾಮಮಂದಿರ ನಿರ್ಮಾಣ, ಕಾಶ್ಮೀರದ 370ನೇ ವಿಧಿ ರದ್ದು, ಪಠ್ಯದಲ್ಲಿ ಭಗವದ್ಗೀತೆ ಇವೆಲ್ಲವನ್ನೂ ಕಾಣುವಾಗ ಭಾರತ ಹಿಂದೂ ರಾಷ್ಟ್ರವಾಗುವುದರಲ್ಲಿ ಸಂದೇಹವಿಲ್ಲ ಎನಿಸುತ್ತಿದೆ ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಜ್ಯೋತಿಷಿ ವಳಕ್ಕುಂಜ ವೆಂಕಟ್ರಮಣ ಭಟ್ಟರನ್ನು ಜ್ಯೋತಿಷ್ಯಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಸನ್ಮಾನಿಸಲಾಯಿತು. ಅಂಬಿಕಾ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಅವರು ರೂಪಿಸಿದ ಭಾರತೀಯ ದಿನದರ್ಶಿಕೆಯನ್ನು ಅನಾವರಣಗೊಳಿಸಲಾಯಿತು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಜವಾಬ್ದಾರಿ ಸ್ವೀಕರಿಸಿದ ರಾಮಚಂದ್ರ ಭಟ್ ಹಾಗೂ ಉಪಪ್ರಾಚಾರ್ಯರಾಗಿ ನಿಯುಕ್ತಿ ಹೊಂದಿದ ಗಣೇಶ್ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಕಾರ್ತಿಕ್ ಕೆದಿಮಾರ್ ವೇದಘೋಷ ನಡೆಸಿಕೊಟ್ಟರು.

ಭಾರತೀಯ ದಿನದರ್ಶಿಕೆಯ ರೂವಾರಿ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ ಸನ್ಮಾನಪತ್ರ ವಾಚಿಸಿದರು. ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ರಾಮಚಂದ್ರ ಭಟ್ ವಂದಿಸಿದರು. ಉಪನ್ಯಾಸಕ ತಿಲೋಶ್ ಕಾರ್ಯಕ್ರಮ ನಿರ್ವಹಿಸಿದರು.