ದುಷ್ಟ ಜೀವಿಗಳು ಹಿಂದುತ್ವವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡು ಹಿಂದುತ್ವದ ಅಡಿಪಾಯವನ್ನೇ ಹಾಳು ಮಾಡುತ್ತಿದ್ದಾರೆ : ಗಿರೀಶ್ ಕೊಟ್ಟಾರಿ. ರಾಜ್ಯ ಉಪಾಧ್ಯಕ್ಷ ರೈತ ಸಂಘ –ಕಹಳೆ ನ್ಯೂಸ್
ಮಂಗಳೂರು : ಹಿಂದೂ ಜನಜಾಗೃತಿ ಸಮಿತಿಯಿಂದ ಬಂಟ್ವಾಳ ತಾಲೂಕಿನ, ಸಮಾಜ ಸೇವಾ ಸಹಕಾರಿ ಬ್ಯಾಂಕ್‌ನ ಸಭಾಂಗಣದಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆ ನಡೆದಿದೆ. ಸಭೆಯಲ್ಲಿ ಮಾತನಾಡಿದ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಗಿರೀಶ್ ಕೊಟ್ಟಾರಿ ಅವರು ಮಾತನಾಡಿ ದುಷ್ಟ ಜೀವಿಗಳು ಹಿಂದುತ್ವವನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡು ಹಿಂದುತ್ವದ ಅಡಿಪಾಯವನ್ನೇ ಹಾಳು ಮಾಡುತ್ತಿದ್ದಾರೆ.
ದೇವಸ್ಥಾನವನ್ನು ಅಪವಿತ್ರ ಗೊಳಿಸುವುದು, ಧ್ವಂಸ ಮಾಡುವುದು ಇಂತಹ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ. ಹಿಂದೂಗಳಲ್ಲಿ ಒಗ್ಗಟ್ಟು ಇಲ್ಲದಿರುವುದರಿಂದ ಇವೆಲ್ಲ ಸಾಧ್ಯವಾಗುತ್ತಿದೆ ಎಂದರು. ಹಿಂದೂಗಳೇ ಎಚ್ಚೆತ್ತಿ- ಜಾತಿ ಮತ ಮರೆತು ಸಂಘಟಿದರಾದರೆ ನಮ್ಮ ಧಾರ್ಮಿಕ ಕ್ಷೇತ್ರದ ಮಹತ್ವವನ್ನು ಇತರರು ಅರಿತುಕೊಳ್ಳುವರು ಮತ್ತು ನಮ್ಮ ದೇವಸ್ಥಾನದ ರಕ್ಷಣೆಯನ್ನು ನಾವು ಮಾಡಬಹುದು. ಪ್ರಕೃತಿಯ ವಿಕೋಪಕ್ಕೂ ಮನುಷ್ಯನ ಸ್ವಾರ್ಥವೇ ಕಾರಣವಾಗಿದೆ. ಕೆಲವು ನಾಯಕರು ರಾಜಕೀಯ ಪಕ್ಷದಲ್ಲಿ ಇರುವಾಗ ಮಾತ್ರ ಹಿಂದುತ್ವದ ವಿಷಯ ಮಾತನಾಡುತ್ತಾರೆ. ಅವರ ಹಿಂದುತ್ವ ಕೇವಲ ವೇದಿಕೆಗೆ ಸೀಮಿತಗೊಂಡಿರುತ್ತದೆ, ನಂತರ ಕೇವಲ ಹೆಸರು ಮತ್ತು ಖ್ಯಾತಿ ಪಡೆಯಲು ಉಪಯೋಗಿಸುತ್ತಾರೆ. ನಮ್ಮ ಶಕ್ತಿ, ಸಾಮರ್ಥ್ಯವು ಹೆಚ್ಚಿಸಿದರೆ ಅವರೇ ನಮ್ಮ ಬಳಿ ಮತ ಕೇಳಲು ಬರುವರು ಎಂದರು.
ಇನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ ಮಾತನಾಡಿ ಇಂದು ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಜಾತ್ಯತೀತತೆ ಹೆಸರಿನಲ್ಲಿ ಹಿಂದೂ ಧರ್ಮದ ಮತ್ತು ಸಮಾಜದ ಮೇಲೆ ನಿರಂತರ ದೌರ್ಜನ್ಯ, ಆಘಾತಗಳು ಘಟಿಸುತ್ತಿರುವುದು ತುಂಬಾ ವಿಷಾದನೀಯವಾಗಿದೆ. ಇದರಿಂದ ಪ್ರತಿಯೊಬ್ಬ ಹಿಂದೂವೂ ಇದರ ಬಗ್ಗೆ ಅರಿತುಕೊಂಡು ಈ ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡಬೇಕಿದೆ. ಇಂದು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ ನಿರಂತರ ಗೋಹತ್ಯೆ ಪ್ರಕರಣಗಳು ಆಗುತ್ತಿದೆ. ಇದರ ಜೊತೆಗೆ ಇಂದು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಇದರ ಬಗ್ಗೆ ಜಾಗರೂಕರಾಗಿರಬೇಕಾಗಿದೆ. ಹಿಜಾಬ್ ಹೆಸರಿನಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಅರಾಜಕತೆ ನಿರ್ಮಾಣ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲಾಗುತ್ತಿದೆ. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಅವರ ಬರ್ಬರ ಹತ್ಯೆಯ ಹಂತಕರಿಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಮತ್ತು ಹಿಂದೂ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಇಂತಹ ದಬ್ಬಾಳಿಕೆಯನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪಿಸುವುದೊಂದೇ ಪರಿಹಾರವಾಗಿದೆ ಎಂದರು.