ಬಂಟ್ವಾಳ: ಶ್ರೀ ಆದಿಶಕ್ತಿ ಬೊಳ್ಳಿಮಾರು ಶ್ರೀ ಕೊರಗಜ್ಜ ಕ್ಷೇತ್ರ ಬೊಳ್ಳಿಮಾರಿನಲ್ಲಿ ಏಪ್ರಿಲ್ 3ರಿಂದ ಜಾತ್ರೋತ್ಸವ ಆರಂಭವಾಗಿದೆ. ನಿನ್ನೆ ಕ್ಷೇತ್ರದಲ್ಲಿ ಶ್ರೀ ಆದಿಶಕ್ತಿ ದುರ್ಗಾಪರಮೇಶ್ವರೀ ಅಮ್ಮನವರಿಗೆ ವಿಶೇಷ ಪೂಜೆ, ಕೊರಗಜ್ಜ ದೈವ ಹಾಗೂ ಪರಿವಾರ ಶಕ್ತಿಗಳಿಗೆ ಗಗ್ಗರ ಸೇವೆ ನಡೆದಿದೆ.
ಜಾತ್ರೋತ್ಸವದಲ್ಲಿ ‘ಸತ್ಯದೈಸಿರಿ’ ಎಂಬ ತುಳು ಭಕ್ತಿಗೀತೆ ಆಲ್ಬಂ ಸಾಂಗ್ ಬಿಡುಗಡೆಗೊಂಡಿದೆ. ಬೊಳ್ಳಿಮಾರು ಕ್ಷೇತ್ರದ ಧರ್ಮದರ್ಶಿ ವಿಜಯ್ ಸಾಲ್ಯಾನ್‌ರವರು ಭಕ್ತಿಗೀತೆ ಆಲ್ಬಂ ಸಾಂಗ್ ಬಿಡುಗಡೆಗೊಳಿಸಿದರು. ಧರ್ಮದರ್ಶಿಯವರ ನಿರ್ಮಾಣ ಹಾಗೂ ಶುಭಾಶೀರ್ವಾದದೊಂದಿಗೆ ಈ ತುಳುಭಕ್ತಿಗೀತೆ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಅನಿಲ್ ಮಡಿವಾಳ್ ಸಾಹಿತ್ಯ ಬರೆದಿದ್ದಾರೆ. ಅಕ್ಷಯ್ ಆಚಾರ್ಯ, ದೀಕ್ಷಾ ಮಡಿವಾಳ್ ಹಾಗೂ ಸ್ವಾತಿ ಪೂಜಾರಿ ಭಕ್ತಿಗೀತೆಗೆ ಧ್ವನಿ ನೀಡಿದ್ದು, ಕಾರ್ತಿಕ್ ಪೂಜಾರಿಯವರ ಸಂಕಲನ ಹಾಗೂ ಅಭಿಷೇಕ್ ಆಚಾರ್ಯರವರ ಕೈಚಳಕದಲ್ಲಿ ಪೋಸ್ಟರ್ ಮೂಡಿಬಂದಿದೆ. ಕಲಾರಂಗ್ ಕ್ರಿಯೇಷನ್ಸ್ ಯೂಟ್ಯೂಬ್ ಚಾನಲ್‌ನಲ್ಲಿ ಈ ಭಕ್ತಿಗೀತೆ ಆಲ್ಬಂ ಸಾಂಗ್ ಬಿಡುಗಡೆಗೊಂಡಿದೆ.
ಕಾರ್ಯಕ್ರಮದಲ್ಲಿ ಸಾಹಿತ್ಯಗಾರ ಅನಿಲ್ ಮಡಿವಾಳ್‌ರವರಿಗೆ ‘ಸಾಹಿತ್ಯ ಯುವ ಸಿರಿ’ ಬಿರುದು, ಗಾಯಕ ಅಕ್ಷಯ್ ಆಚಾರ್ಯರವರಿಗೆ ‘ಪ್ರತಿಭಾ ಸಿಂಚನ’ ಬಿರುದು ಹಾಗೂ ಗಾಯಕಿ ದೀಕ್ಷಾ ಮಡಿವಾಳ್‌ರವರಿಗೆ ‘ಗಾನ ಕಿನ್ನರಿ’ ಬಿರುದು ನೀಡಿ ಕ್ಷೇತ್ರದ ವತಿಯಿಂದ ಸನ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ಕ್ಷೇತ್ರದ ಚಾರಿಟೇಬಲ್ ಟ್ರಸ್ಟ್ನ ಗೌರವಾಧ್ಯಕ್ಷರಾದ ಪದ್ಮಶೇಖರ್ ಜೈನ್ ಬಲ್ಲೋಡಿ ಮಾಗಣೆ ಗುತ್ತು, ಅಧ್ಯಕ್ಷರಾದ ಕೆ.ಜಿ ಯಶೋಧರ್ ಕಲ್ಲಂಜ ಸೇರಿದಂತೆ ಇತರರು ಉಪಸ್ಥಿತರಿದ್ದರು.