Saturday, November 23, 2024
ದಕ್ಷಿಣ ಕನ್ನಡಸುದ್ದಿ

ಬೆಳ್ತಂಗಡಿ : ಅರಣ್ಯ ಸಂಚಾರಿ ದಳದ ರೇಂಜರ್ ಸಂಧ್ಯಾರಿಂದ ದೌರ್ಜನ್ಯ ಆರೋಪ : ಮಾನಸಿಕವಾಗಿ ಕುಗ್ಗಿ ಅಮಾಯಕ ಕೂಲಿ ಕಾರ್ಮಿಕ ಸಾವು- ಕಹಳೆ ನ್ಯೂಸ್

ಬೆಳ್ತಂಗಡಿ : ಕಳೆದ ಎರಡು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬದ್ಯಾರು ನಿವಾಸಿ ಕೂಲಿ ಕಾರ್ಮಿಕನಾಗಿರುವ ರಾಮನಾಯ್ಕ (58) ಅವರ ಮನೆಯವರು ಗಿಡ ನೇಡಲು ಸಣ್ಣ ಸಣ್ಣ ಮರಗಳನ್ನು ಕಡಿದಾಗ ಮೇಲೆ ಅರಣ್ಯ ಸಂಚಾರಿ ದಳದ ರೇಂಜರ್ ಸಂಧ್ಯಾ ಸಚಿನ್ ಅವರು ದಾಳಿ ಮಾಡಿ ಮರದ ಕಡಿದ ಬಗ್ಗೆ ದೂರು ದಾಖಲಿಸಿ ಖಾಲಿ ಪೇಪರ್ ಗೆ ಸಹಿ ಹಾಕಿ ನಂತರ ಬೆದರಿಸಿದ್ದರು ಎಂದು ಆರೋಪಿಸಲಾಗಿದೆ.

ಅದಲ್ಲದೆ ಅನೇಕ ಬಾರಿ ಮನೆಗೆ ಬಂದು ಹಿಂಸೆ ಮಾಡುತ್ತಿದ್ದರು , ಪ್ರಕರಣ ಮುಗಿಸಲು 5 ಲಕ್ಷ ಹಣಕ್ಕೆ ಕೂಡ ಸಂಧ್ಯಾ ಬೇಡಿಕೆ ಇಟ್ಟಿದ್ದರು. ಇದರಿಂದ ಮಾನಸಿಕವಾಗಿ ನೊಂದು ಕುಗ್ಗಿದ್ದರು ಎನ್ನಲಾಗಿದೆ. ಮಂಗಳವಾರ ರಾತ್ರಿ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯರು ರಾಮನಾಯ್ಕ ಅವರು ಮಾನಸಿಕವಾಗಿ ನೊಂದು ಸಾವನ್ನಪ್ಪಿದ್ದಾರೆ ಎಂದು ಮನೆಯವರಿಗೆ ತಿಳಿಸಿದ್ದಾರೆ. ಮಂಗಳೂರು ಆಸ್ಪತ್ರೆಯಿಂದ ತಂದು ಬೆಳ್ತಂಗಡಿ ಪೆÇಲೀಸ್ ಠಾಣೆ ಮುಂದೆ ಇಟ್ಟು ಬಿಜೆಪಿ ಯುವ ಮೊರ್ಚಾ ಮತ್ತು ಬಿಜೆಪಿ ಎಸ್ಸಿ & ಎಸ್ಟಿ ಮೋರ್ಚಾ ದಿಂದ ಪ್ರತಿಭಟನೆ ನಡೆಸಿ ಸಂಧ್ಯಾ ಸಚಿನ್ ಮೇಲೆ ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು