ಪೆರ್ಲ ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ನೂತನ ಅಧ್ಯಕ್ಷರಾಗಿ ಉಮೇಶ್ ಗೌಡ ಅಂಗಡಿಮಜಲು ಆಯ್ಕೆ – ಕಹಳೆ ನ್ಯೂಸ್
ಪೆರ್ಲ ಬೈಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘ 2012ನೇ ಇಸವಿಯಲ್ಲಿ ಪ್ರಾರಂಭಗೊಂಡು ದಿನವಾಹಿ ಸು. 2000 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಸು10 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಾಹಿಸುತ್ತಿದೆ. ಪ್ರಥಮ ವರ್ಷದ ಸ್ಥಾಪಕ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ ಪಾಪುದಡ್ಕ ಹಾಗೂ 2ಅವಧಿಗೆ ಅಧ್ಯಕ್ಷರಾಗಿ ಹರೀಶ್ ಪರಪ್ಪಾಜೆ, ಇದೀಗ 3ನೇ ಅವಧಿಗೆ ಆಡಳಿತ ಮಂಡಳಿಯ ಚುನಾವಣೆ ನಡೆಸಿದ್ದು ಉಮೇಶ್ ಗೌಡ ಅಂಗಡಿಮಜಲು ಇವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಯಮುನ ಕುರುಡಂಗೆ ಆಯ್ಕೆಯಾಗಿರುತ್ತಾರೆ.
ಸಂಘದ ನೂತನ ನಿರ್ದೇಶಕರಾಗಿ, ಬಾಲಕೃಷ್ಣ ಗೌಡ, ತಿಲಕ್, ದಾಮೋದರ ಗೌಡ, ನಾರಾಯಣ ಗೌಡ, ಪೂವಪ್ಪ ಗೌಡ, ಲಕ್ಷ್ಮೀಕಾಂತ ವಿಶ್ವನಾಥ ಗೌಡ, ಶಶಿಕಲಾ ಶ್ಯಾಮಲ, ಅಣ್ಣು, ರುಕ್ಮುಯ್ಯ ನಾಯ್ಕ ಆಯ್ಕೆಯಾಗಿರುತ್ತಾರೆ.
ಚುನಾವಣೆ ಯಶಸ್ವಿಯಾಗಿ ನಡೆಸುವಲ್ಲಿ ಮುಖ್ಯ ಚುನಾವಧಿಕಾರಿಯಾಗಿ ವಿಲಾಸ್ ನಾಯಕ್ ಇವರು ಸಹಕರಿಸಿದರು ಎಂದು ಸಂಘದ ಮುಖ್ಯ ಕಾರ್ಯದರ್ಶಿಯಾದ ಹರೀಶ್ ಗೌಡ ಕೆ. ತಿಳಿಸಿದರು.
ಸಂಘದ ಮುಂದಿನ ಯೋಜನೆಯಾಗಿ ಸ್ವಂತ ಕಟ್ಟಡ ಅಪೇಕ್ಷೆಯು ಈ ಅವಧಿಯಲ್ಲಿ ಪೂರ್ಣಗೊಳ್ಳಲಿ ಎಂಬುದು ಸಂಘದ ಸದಸ್ಯರ ಆಶಯ.
ಗುಣಮಟ್ಟದ ಹಾಲು ಸಂಗ್ರಹಣೆ, ಸ್ವಂತ ಕಟ್ಟಡ, ಹಾಗೂ ಕೆ.ಎಮ್,ಎಫ್ ಮತ್ತು ಸರಕಾರದಿಂದ ಹೈನುಗಾರಿಕೆಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ಎಲ್ಲಾ ಸದಸ್ಯರಿಗೂ ಸಿಗುವಂತೆ ಮುತುರ್ವಜಿಯಿಂದ ಕಾರ್ಯ ನಿರ್ವಹಿಸುವುದಾಗಿ ನೂತನ ಅಧ್ಯಕ್ಷರು ಅಭಿಪ್ರಾಯಪಟ್ಟರು.