Sunday, November 24, 2024
ದಕ್ಷಿಣ ಕನ್ನಡಸುದ್ದಿ

ಮಂಗಳೂರು: ಸ್ಪೈಸ್ ಜೆಟ್ ಲಿಮಿಟೆಡ್‍ಗೆ ಬಿಸಿ ಮುಟ್ಟಿಸಿದ ಗ್ರಾಹಕ ನ್ಯಾಯಾಲಯ, ಗ್ರಾಹಕರ ಸೇವೆಯಲ್ಲಿ ಲೋಪ, ಟಿಕೇಟಿನ ಹಣ ಹಿಂತಿರುಗಿಸಲು ಮತ್ತು ಖರ್ಚು ಭರಿಸಲು ಸ್ಪೈಸ್ ಜೆಟ್ ಲಿಮಿಟೆಡ್ ಗೆ ದ.ಕ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅದೇಶ-ಕಹಳೆ ನ್ಯೂಸ್

ಮಂಗಳೂರು: ಪುತ್ತೂರಿನ ಮೇರಿ ಮತ್ತು ಅವರ ಇಬ್ಬರು ಮಕ್ಕಳು  ಬೆಂಗಳೂರಿಗೆ ಹೋಗುವರೇ ಏಜೆಂಟ್ ಮುಖಾಂತರ ಸ್ಪೈಸ್ ಜೆಟ್ ಲಿಮಿಟೆಡ್ ಸಂಸ್ಥೆಯ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು, ಆದರೆ ಸದ್ರಿ ಸಂದರ್ಭ ಅವರು ಪ್ರಯಾಣವನ್ನು ನಿಗದಿಗೊಳಿಸಿದ ಸಂದರ್ಭದಲ್ಲಿ ಕೋವಿಡ್ ಕಾರಣದಿಂದ ವಿಮಾನಯಾನ ಪ್ರಯಾಣ ರದ್ದಾಗಿತ್ತು. ಕೋವಿಡ್-19 ಲಾಕ್ ಡೌನ್ ಕಾರಣದಿಂದ ಪ್ರಯಾಣ ರದ್ದಾದ ಕಾರಣ ಅದರ ಪ್ರಯಾಣದ ವೆಚ್ಚವನ್ನು ಸ್ಪೈಸ್ ಜೆಟ್ ಲಿಮಿಟೆಡ್ ಮರುಪಾವತಿ ಮಾಡಬೇಕಾಗಿತ್ತು, ಗ್ರಾಹಕರು ಹಲವಾರು ಬಾರಿ ಕೋರಿಕೊಂಡರೂ ವಿಮಾನ ಯಾನ ಸಂಸ್ಥೆ ಹಣವನ್ನು ಮರುಪಾವತಿಸಲಿಲ್ಲ ಬದಲಿಗೆ ವಿಮಾನಯಾನ ಸಂಸ್ಟೆಯವರು ಅದನ್ನು ಸರ್ವೋಚ್ಚ ನ್ಯಾಯಾಲಯ, ವಾಯುಯಾನ ಸಂಸ್ಟೆಯವರು ರಿ ಶೆಡ್ಯೂಲ್ ಮಾಡಲು ಹೇಳಿರುತ್ತಾರೆ ಹಾಗಾಗಿ ಅದನ್ನು ಒಂದು ವರ್ಷದ ಒಳಗೆ ಅದೇ ಸೌಲಭ್ಯವನ್ನು ಬೇರೆ ಕಡೆಗೆ ಹೋಗುವುದಿದ್ದರೂ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆಯೇ ಹೊರತು ಯಾವುದೇ ಹಣವನ್ನು ಹಿಂತುರಿಗಿಸಲಿಲ್ಲ. ಹಲವಾರು ಬಾರಿ ಮನವಿ ಕೊಟ್ಟರೂ ಗಣನೆಗೆ ತೆಗೆದುಕೊಂಡಿರುವುದಿಲ್ಲ .ತದನಂತರ ವಕೀಲರ ಮುಖಾಂತರ ನೋಟಿಸ್ ಕೊಟ್ಟಾಗಳೂ ಅದಕ್ಕೆ ಸರಿಯಾಗಿ ಸ್ಪಂದಿಸಿರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಏಲ್ಲಾ ಕಾರಣಗಳಿಂದಾಗಿ ಸಂಸ್ಥೆಯವರು ನ್ಯೂನ್ಯತೆಯ ಸೇವೆಯನ್ನು ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಬೇಕಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಅಯೋಗದಲ್ಲಿ ಮೇರಿಯವರು ದೂರು ದಾಖಲಿಸಿದ್ದರು. ದೂರು ದಾಖಲಿಸಿದ ನಂತರ ವಿಮಾನ ಯಾನ ಸಂಸ್ಟೆಯವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು ಮತ್ತು ವಿಮಾನ ಯಾನ ಸಂಸ್ತೆಯವರು , ಸದ್ರಿ ಹಣವನ್ನು ಮೇರಿಯವರು ಏಜೆಂಟ್ ಮುಖಾಂತರ ತೆಗೆದುಕೊಳ್ಳಬೇಕಿತ್ತು ಮತ್ತು ಸಂಸ್ಥೆಯಿಂದ ಯಾವುದೆ ದೋಷ ಇಲ್ಲ ಎಂಬುದಾಗಿ ವಾದಿಸಿದ್ದರು. ಆದರೆ ವಾದಿ ಪರವಾಗಿ ಹಲವಾರು ಬಾರಿ ಸರ್ವೊಚ್ಚ ನ್ಯಾಯಾಲಯ ಮಾಡಿದ ಆದೇಶಗಳನ್ನು ಇನ್ನಿತರ ಸಂದರ್ಭಗಳನ್ನು ಉಲ್ಲೇಖಿಸಿ ಅರ್ಜಿದಾರರ ತಪ್ಪಿನಿಂದಾಗಿ ಆ ಪ್ರಯಾಣ ರದ್ದಾದದ್ದಲ್ಲ ಕೋವಿಡ್-19 ಕಾರಣದಿಂದ ಪ್ರಯಾಣ ರದ್ದಾದ ಕಾರಣ ಸರಕಾರದ ನಿರ್ದೇಶನ ಮತ್ತು ಸರ್ವೊಚ್ಚ ನ್ಯಾಯಾಲಯದ ನಿರ್ದೇಶನದ ಅನ್ವಯ ಅವರು ಪೂರ್ತಿ ಟಿಕೆಟ್‍ನ ಹಣವನ್ನು ಮರಳಿ ಕೊಡಬೇಕು ಮಾತ್ರವಲ್ಲ ಅದರ ಮೇಲೆ ವಿಳಂಬ ಮಾಡಿದ್ದಕ್ಕೆ ಬಡ್ಡಿಯನ್ನೂ ಕೊಡಬೇಕು ಮತ್ತು ನ್ಯಾಯಾಲಯಕ್ಕೆ ಅಳೆದಾಡುವ ಸಂದರ್ಭವನ್ನು ಉಂಟುಮಾಡಿದ್ದಕ್ಕೆ ಬೇಕಾಗಿ ಖರ್ಚನ್ನು ಕೊಡಬೇಕಾಗಿರುತ್ತದೆ ಎಂದು ತಮ್ಮ ವಕೀಲರಾದ ಮಹೇಶ್ ಕಜೆಯವರ ಮುಖಾಂತರ ವಾದಿಸಿದ್ದರು ಅದನ್ನು ಗ್ರಾಹಕ ನ್ಯಾಯಾಲಯವು ಪುರಸ್ಕರಿಸಿ ವಿಮಾನಯಾನ ಸಂಸ್ತೆಯವರು ಟಿಕೆಟ್ ನ ಮೌಲ್ಯ ಮತ್ತು 6% ಬಡ್ಡಿ ಸಹಿತವಾಗಿ ಮಾತ್ರವಲ್ಲದೆ ವ್ಯಾಜ್ಯದ ಖರ್ಚು ಸಹಿತವಾಗಿ ದೂರುದಾರನಿಗೆ ಪಾವತಿಸಬೇಕೆಂದು ಆದೇಶಿಸಿದೆ. ಸಾಮಾನ್ಯ ಗ್ರಾಹಕರೊಬ್ಬರು ಬೃಹತ್ ಸಂಸ್ಥೆಯ ವಿರುದ್ಧ ತನ್ನ ಹಕ್ಕಿಗಾಗಿ ಹೋರಾಡಿ ಜಯಗಳಿಸಿದ ಅಸಾಮಾನ್ಯ ಘಟನೆ ಇದಾಗಿದೆ.