Friday, September 20, 2024
ಸುದ್ದಿ

Breaking News : ಭಾರಿ ಭೂ ಕುಸಿತಕ್ಕೆ ಚಾರ್ಮಾಡಿ ಘಾಟಿ ಬಂದ್ ; ಮಧ್ಯದಲ್ಲಿ ಸಿಲುಕಿದ ಮೂವತ್ತಕ್ಕೂ ಅಧಿಕ ಪ್ರಯಾಣಿಕರ ಸ್ಥಿತಿ ಶೋಚನೀಯ – ಕಹಳೆ ನ್ಯೂಸ್

ಉಜಿರೆ : ರಾಜ್ಯಾದ್ಯಂತ ಮುಂದುವರಿದ ಮುಂಗಾರು ಅಬ್ಬರಕ್ಕೆ ಚಾರ್ಮಾಡಿ ಘಾಟ್​ ರಸ್ತೆಯಲ್ಲಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕೂಡಾ ಗುಡ್ಡ ಕುಸಿತ ಮುಂದುವರಿದೆ. ಘಾಟ್​​ನ ರಸ್ತೆಯ 2ನೇ ಮತ್ತು 3ನೇ ತಿರುವಿನಲ್ಲಿ ಮಂಗಳವಾರ ಗುಡ್ಡ ಕುಸಿತವಾಗಿದ್ದು, ಸದ್ಯ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

ಜಾಹೀರಾತು

ಸೋಮವಾರ ಸಂಜೆ 7 ಗಂಟೆಗೆ ಸುಮಾರಿಗೆ ಗುಡ್ಡ ಕುಸಿದಿದ್ದು, ಅದೇ ಸ್ಥಿತಿ ಮುಂದುವರಿದೆ. ಎರಡು ಬದಿಗಳಲ್ಲೂ ವಾಹನಗಳು ಕಿ.ಲೋ ಮೀಟರ್ ಗಟ್ಟಲೆ ದೂರ ಸಾಲುಗಟ್ಟಿ ನಿಂತಿವೆ. ಸಾಲು ಗಟ್ಟಿದ ವಾಹನಗಳಲ್ಲಿದ್ದ ಪ್ರಯಾಣಿಕರು , ಆಹಾರಕ್ಕಾಗಿ ಪರದಾಟುತ್ತಿದ್ದು, ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಕೂಡಾ ಮಣ್ಣು ತೆರವಿಗೊಳಿಸಿಲು ಶ್ರಮಿಸುತ್ತಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಕೊಟ್ಟಿಗೆಹಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಎಸ್.ಕೆ. ಬಾರ್ಡರ್ ಹಾಗೂ ಕುದುರೆಮುಖ ಮೂಲಕವೂ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಾಣಿ – ಮೈಸೂರು ಹೆದ್ದಾರಿಯಲ್ಲಿ ವಾಹನ‌ ಸಂಚಾರಕ್ಕೆ ಅನುವು ಮಾಡಲಾಗಿದ್ದು, ರಾತ್ರಿಯಿಡಿ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.