Wednesday, January 22, 2025
ದಕ್ಷಿಣ ಕನ್ನಡಪುತ್ತೂರುಬಂಟ್ವಾಳಸುದ್ದಿ

ಹಿಂ.ಜಾ.ವೇ.ಪ್ರಮುಖರಿಂದ ಬಂಟ್ವಾಳದಲ್ಲಿ ಮುಖ್ಯಮಂತ್ರಿ ಭೇಟಿ ; ಹಿಂದೂ ವಿರೋಧಿ ಆರೋಪದಡಿ ಪುತ್ತೂರು ಡಿವೈಎಸ್ಪಿ ಗಾನ ವರ್ಗಾವಣೆಗೆ ಮನವಿ – ಕಹಳೆ ನ್ಯೂಸ್

ಬಂಟ್ವಾಳ ತಾಲೂಕಿನ ಬ್ರಹ್ಮರಕೂಟ್ಲುವಿನಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಹಿಂ.ಜಾ.ವೇ. ಕಾರ್ಯಕರ್ತರು ಬೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಪುತ್ತೂರಿನ ಹಿಂದೂ ವಿರೋಧಿ ಡಿ.ವೈ.ಎಸ್ಸಿ. ಗಾನ ಅವರನ್ನು ಕೂಡಲೇ ಪುತ್ತೂರಿನಿಂದ ವರ್ಗವಣೆ ಮಾಡುವಂತೆ ಹಾಗೂ ಪುತ್ತೂರಿನ ವಿದ್ಯಾರ್ಥಿಗಳ ಮೇಲೆ ವಿನಾ ಕಾರಣ ಕೇಸು ದಾಖಲಿಸಿ, ರೌಡಿ ಶೀಟರ್ ದಾಖಲೆ ಮಾಡಿದ್ದನ್ನು ರದ್ದು ಮಾಡುವಂತೆ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಹಿಂ.ಜಾ.ವೇ.ಪುತ್ತೂರು ತಾಲೂಕು ಗೌರವಧ್ಯಕ್ಷ ಡಾ | ಎಂ.ಕೆ. ಪ್ರಸಾದ್ ಭಂಡಾರಿ, ಶಾಸಕರಾದ ಸಂಜೀವ ಮಠಂದೂರು,ರಾಜೇಶ್ ನಾಯ್ಕ್. ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ ಸಾಜ ರಾಧಾಕೃಷ್ಣ ಆಳ್ವ ಹಿಂಜಾವೇ ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಹೊಸಮನೆ, ಕಾರ್ಯದರ್ಶಿ ಪ್ರಶಾಂತ್ ಕೆಂಪುಗುಡ್ಡೆ,ಪುತ್ತೂರು ತಾಲೂಕು ಪ್ರದಾನ ಕಾರ್ಯದರ್ಶಿ ದಿನೇಶ್ ಪಂಜಿಗ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು