Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್‍ಪೂರ್ವ ವಿಭಾಗದಲ್ಲಿ ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವತ್‍ಪೂರ್ವ ವಿಭಾಗದಲ್ಲಿ ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಇವರು ಶೇ 65 ಅಂಕ ಪಡೆದು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀಪ್ರವೀಣ್‍ಕುಮಾರ್ ಮುಡಂಬಡಿತ್ತಾಯ ಗಾಣದಮೂಲೆ ಇವರ ಪತ್ನಿಯಾಗಿರುವ ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಅನ್ನೋ ಹಂಬಲ ಇಟ್ಟುಕೊಂಡಿದ್ದ ಇವರು ಊರ್ವಸ್ಟೋರ್‍ನ ‘ನಾದ ಸರಸ್ವತಿ ಸಂಗೀತ ಶಾಲೆ’ಯ ನಿರ್ದೇಶಕಿ ವಿದುಷಿ ಶ್ರೀಮತಿ ಸತ್ಯವತಿ ಜಿ ಬಿಮುಡಂಬಡಿತ್ತಾಯ ಹಾಗೂ ವಿದ್ವಾನ್ ಶ್ರೀ ಕೃಷ್ಣಪವನ್ ಕುಮಾರ್ ಮುಡಂಬಡಿತ್ತಾಯ ಇವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು, ಇವರ ನೆಚ್ಚಿನ ಶಿಷ್ಯೆಯಾಗಿದ್ದಾರೆ. ಶ್ರೀಮತಿ ಪ್ರತಿಭಾಪ್ರವೀಣ್ ಕುಮಾರ್ ಅವರು ಶ್ರೀಮತಿ ಪದ್ಮಾಕ್ಷಿ ಹಾಗೂ ಶ್ರೀ ಮುರಳೀಧರ ಕೆದಿಲಾಯ ಆಕಿರೆಬರಿ ಇವರ ಪುತ್ರಿ.

ಜಾಹೀರಾತು

ಜಾಹೀರಾತು
ಜಾಹೀರಾತು