Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ – ಕಹಳೆ ನ್ಯೂಸ್

ಪುತ್ತೂರು : ನರಿಮೊಗರಿನ ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮರಾವ್ ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಲಾಯಿತು.

ಅತ್ಯಂತ ಅಧ್ಯಯನ ಶೀಲ ವ್ಯಕ್ತಿತ್ವದ ಅಂಬೇಡ್ಕರ್, ಭಾರತದ ಶ್ರೇಷ್ಠ ಚಿಂತಕರಲ್ಲಿ ಓರ್ವರು. ಯಾರ ಪ್ರಭಾವಕ್ಕೂ ಒಳಗಾಗದೆ ತಮ್ಮದೇ ವಿಶಿಷ್ಟ ವಿಮರ್ಶೆಯ ದೃಷ್ಟಿ ಬೆಳೆಸಿಕೊಂಡವರು ಡಾ. ಅಂಬೇಡ್ಕರ್ ಎಂದು ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಗುರು ರಾಜರಾಮ ವರ್ಮಾ ದಿನದ ಮಹತ್ವವನ್ನು ತಿಳಿಸಿದರು. ಶಾಲಾ ಸಿಬ್ಬಂದಿ ಶ್ರೀಮತಿ ಶಾಲಿನಿ ಜಯರಾಮ್, ಯಜ್ಞೆಶ್, ವಿದ್ಯಾರ್ಥಿ ಅಚಿಂತ್ಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು