Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಏ.17ರಂದು ಮಾಲಾಡಿಯಲ್ಲಿ 131ನೇ ವರ್ಷದ ಅಂಬೇಡ್ಕರ್ ಜಯಂತಿ: ‘ಜೈ ಭೀಮ್’ ಚಲನಚಿತ್ರ ಉಚಿತ ಪ್ರದರ್ಶನ- ಕಹಳೆ ನ್ಯೂಸ್

ಮಡಂತ್ಯಾರು: ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ‘ಮಾಲಾಡಿ ಅಂಬೇಡ್ಕರ್’ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನಾಚರಣಾ ಸಮಿತಿ ಮಾಲಾಡಿ ಆಶ್ರಯದಲ್ಲಿ ಏ.17ರಂದು 131ನೇ ವರ್ಷದ ಅಂಬೇಡ್ಕರ್ ಜಯಂತಿಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಳಗ್ಗೆ 11 ಗಂಟೆಯಿAದ ಪುರುಷರಿಗೆ ಹಗ್ಗಜಗ್ಗಾಟ, 100ಮೀ ಓಟ, ಮಹಿಳೆಯರಿಗೆ ಸಂಗೀತ ಕುರ್ಚಿ, ಹಗ್ಗಜಗ್ಗಾಟ, ಬಾಲಕ, ಬಾಲಕಿಯರಿಗೆ 100ಮೀ ಓಟ, ಆಟೋಗ್ರಾಫ್, ಬಾಟಲಿಗೆ ನೀರು ತುಂಬಿಸುವುದು, ಸ್ಟಾç ಆಟ, ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ.

ಸಂಜೆ 6:30ರಿಂದ ವಿವಿಧ ಗ್ರಾಮದ ಪ್ರತಿಭೆಗಳಿಂದ ಹಾಡು, ನೃತ್ಯ, ಪ್ರಹಸನಗಳ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ.
ರಾತ್ರಿ 10 ಗಂಟೆಗೆ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಸಹಯೋಗದಲ್ಲಿ ‘ಜೈ ಭೀಮ್’ ಚಲನಚಿತ್ರ ಉಚಿತ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು