ಮಂಗಳೂರು : ಎ.15 ರಂದು ಗೌರವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಬೆಳ್ತಂಗಡಿ ವೀರಕೇಸರಿ ಸಂಸ್ಥೆಯ 150 ನೇ ಸೇವಾ ಯೋಜನೆಯ 6ನೇ ಆಸರೆ ನಿಲಯ ಯೋಜನೆಯಡಿ ಬಡ ಕುಟುಂಬವೊಂದರ ಗೃಹಪ್ರವೇಶ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಇತ್ತೀಚಿಗೆ ಕರಾವಳಿಯಾದ್ಯಂತ ಅಲ್ಲದೇ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾಗುವಂತೆ ಮಾಡಿದ ತುಳುನಾಡಿ ಕಾರಣೀಕದ ದೈವ ಸ್ವಾಮಿ ಕೊರಗಜ್ಜನ ಮುಖವರ್ಣಿಕೆ ಡಿಜಿಟಲ್ ವೆಕ್ಟರ್ ಆರ್ಟ್ ಮೂಲಕ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿರುವುದಲ್ಲದೆ ನಂತರದ ದಿನಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿ , ಮಂತ್ರದೇವತೆ, ಬ್ರಹ್ಮಶ್ರೀ ನಾರಾಯಣ ಗುರುಗಳು, ಹೀಗೆ ಇನ್ನಿತರ ಹಲವಾರು ದೈವ ದೇವರುಗಳ ಮುಖ ವರ್ಣಿಕೆಯ ವೆಕ್ಟರ್ ಚಿತ್ರಗಳ ಮೂಲಕ ಎಲ್ಲಾ ಸಮಾಜದವರ ಪ್ರಶಂಸೆಗೆ ಪಾತ್ರರಾಗಿದ್ದ ಶಶಾಂಕ್ ಆಚಾರ್ಯ ರ ಕಲೆಯನ್ನು ಗುರುತಿಸಿ ಅವರಿಗೆ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಂಗಳೂರಿನ ಸ್ವರ್ಣಶಿಲ್ಪಿ ಜಗದೀಶ್ ಆಚಾರ್ಯ ಸಿದ್ಧಕಟ್ಟೆ ಮತ್ತು ಶ್ರೀಮತಿ ಶ್ಯಾಮಲಾ ಆಚಾರ್ಯ ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿರುವ ಶಶಾಂಕ್ ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಪೂರೈಸಿದರು. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹೊಂದಿದ ಇವರು ನಂತರ ಗ್ರಾಫಿಕ್ ಡಿಸೈನ್, ವೆಬ್ ಡಿಸೈನ್ ಆನಿಮೇಷನ್ ನಲ್ಲಿ ಡಿಪೆÇ್ಲಮಾ ಪದವಿ ಮುಗಿಸಿ ಮುಂದಕ್ಕೆ ವೃತ್ತಿ ಜೀವನವನ್ನು ಗ್ರಾಫಿಕ್ ಡಿಸೈನರ್ ಹಾಗೂ ಛಾಯಾಚಿತ್ರಗ್ರಾಹಕರಾಗಿ, ಪ್ರಸ್ತುತ ನಗರದ ಕೆ.ಎಸ್.ರಾವ್ ರೋಡ್‍ನಲ್ಲಿ ಡಿಸೈನ್ ಸ್ಟುಡಿಯೋ ಎಂಬ ಹೆಸರಿನ ಸಂಸ್ಥೆಯನ್ನು ಸ್ಥಾಪಿಸಿ ನಡೆಸಿಕೊಂಡು ಬರುತ್ತಿದ್ದಾರೆ.
ಇವರು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರಾಗಿ ಸಮಾಜದಲ್ಲಿ ಗುರುತಿಸಿಕೊಂಡವರು ಮತ್ತು ಸಮಾಜದ ಅಶಕ್ತರ ಆಶಾಕಿರಣವೆಂದೇ ಪ್ರಸಿದ್ದಿಯಾದ ಅಮೃತಸಂಜೀವಿನಿ (ರಿ.) ಇದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದವರು ಹಾಗೂ ಹಿಂದೂ ಸಂರಕ್ಷಣಾ ಸಮಿತಿಯ ಜವಾಬ್ದಾರಿಯುತ ಸದಸ್ಯರಾಗಿರುವರು . ಮಾತ್ರವಲ್ಲದೇ ಅನೇಕ ಸಂಘ ಸಂಸ್ಥೆಗಳಿಗೆ ಅತ್ಯದ್ಭುತ ಲೋಗೋ ತಯಾರಿಸಿ ಕೊಟ್ಟಂತಹ ಹೆಗ್ಗಳಿಗೆ ಇವರದ್ದಾಗಿದೆ.