Monday, January 20, 2025
ಕ್ರೈಮ್ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಪ್ರತಿಷ್ಠಿತ ಪುತ್ತೂರಿನ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಗೆ ಧಮ್ಕಿ, ಹಣಕ್ಕೆ ಬೇಡಿಕೆ – ಅಶ್ಲೀಲ ಪದ ಬಳಸಿ ನಿಂದನೆ ;  ಕೌಡಿಚ್ಚಾರ್ ನ ಕತರ್ನಾಕ್ ಯುವಕ ನಿತೀಶ್ ರೈ ವಿರುದ್ಧ ಮಹಿಳಾ ಪೋಲೀಸ್ ಠಾಣೆಯಲ್ಲಿ ಎಫ್. ಐ. ಆರ್. – ಕಹಳೆ ನ್ಯೂಸ್

ಪುತ್ತೂರು : ನಗರದಲ್ಲಿ ದೀನೆ ದೀನೆ ಪುಂಡ ಯುವಕರ ಆಟಾಟೋಪ ನಡೆಯುತ್ತಿದ್ದು, ಅಂತಹದ್ದೇ ಒಂದು ಪ್ರಕರಣ ಪುತ್ತೂರಿನ ಮಹಿಳಾ ಠಾಣೆಯಲ್ಲಿ ವರದಿಯಾಗಿದೆ.

ಎಸ್, ಹೌದು ಪುತ್ತೂರಿನ ಪ್ರತಿಷ್ಠಿತ ಬೋರ್ವೆಲ್ಸ್ ಸಂಸ್ಥೆಯ ಮಾಲಕಿ ಒಬ್ಬರಿಗೆ ಹಣಕ್ಕೆ ಬೇಡಿಕೆಯಿಟ್ಟು, ಆಶ್ಲೀಲ ಪದ ಬಳಸಿ, ಕೊಲೆ ಬೆದರಿಕೆ ಒಡ್ಡಿದ ಘಟನೆ ಘಟಿಸಿದೆ. ಈ ಕುರಿತು ಪುತ್ತೂರು ಮಹಿಳಾ ಪೋಲೀಸ್ ಠಾಣೆಗೆ ಮಾಲಕಿ ದೂರು ನೀಡಿದ್ದು, ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಆರೋಪಿ ನಿತೀಶ್ ರೈ

ಏನಿದು ಪ್ರಕರಣ :
ದಿನಾಂಕ : 16.04.2022 ಮಧ್ಯಾಹ್ನ ಸುಮಾರು 3.00 ಘಂಟೆಯ ಸಮಯಕ್ಕೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯನ್ನು ಸ್ವಚ್ಛಗೊಳಿಸುವ ಸೇವಾಕಾರ್ಯದಲ್ಲಿ ನಿರತರಾಗಿರುದ್ದ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಗೆ ಮೂರು ಭಾರಿ ನಿತೇಶ್ ರೈ ಎಂಬವರು ಮೊಬೈಲ್ ಸಂಖ್ಯೆ 9632115854 ಯಿಂದ ಕರೆಮಾಡಿ ಆರೋಪಿತನು ಏಕಾಏಕಿ ಮಾಲಕಿಯನ್ನು ಉದ್ದೇಶಿಸಿ ಆಕೆಯ ಚಾತಿತ್ರ್ಯಕ್ಕೆ ಮಸಿ ಬಳಿಯುವ ರೀತಿಯಲ್ಲಿ ತುಳುಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ, ಚಾರಿತ್ರ್ಯ ಹರಣ ಇತ್ಯಾದಿ ಮಾಡಿರುತ್ತಾನೆ. ಹಾಗೂ ಮಾತನಾಡಲು ನೀರಾಕರಿಸಿದರೂ ಮತ್ತೂ ಮತ್ತೂ ಒತ್ತಯಾ ಪೂರ್ವಕವಾಗಿ ಮಾತನಾಡಲು ಮುಂದಾಗುದ್ದ, ಈ ಸಂದರ್ಭದಲ್ಲಿ ಫೋನ್ ಲೌಡ್ ಸ್ಪೀಕರ್ ನಲ್ಲಿ ಇದ್ದ ಕಾರಣ ಸ್ಥಳದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದ ತಾಯಿ ಹಾಗೂ ಮತ್ತಿತರರು ಈ ಮಾತುಗಳನ್ನು ಕೇಳಿಸಿಕೊಂಡಿದ್ದರು‌. ಇದರಿಂದಾಗಿ ತೀವ್ರ ಆಘಾತವಾಗಿದೆ, ಮಾತ್ರವಲ್ಲದೆ ಈ ಘಟನೆ ಘಟಿಸಿದ ಕಾರಣ ಮಾನಹಾನಿಯಾಗಿರುತ್ತದೆ ಹಾಗೂ ಮಾನಸಿಕ ಕಿನ್ನತೆಗೆ ಒಳಗಾಗಿರುತ್ತೇನೆ‌. ಹಾಗೂ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ದೂರಿನಲ್ಲಿ ಮಾಲಕಿ ಉಲ್ಲೇಖಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣ ದಾಖಲಿಸಿದ್ದೇವೆ, ಆರೋಪಿ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ – ಎಸ್.ಪಿ.

ಈ ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಶಿಕೇಶ್ ಸೋನಾವಣೆ ಬೋರ್ವೆಲ್ಸ್ ಸಂಸ್ಥೆಯ ಮಾಲಕಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದೇವೆ, ಆರೋಪಿ ನಿತೇಶ್ ರೈ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.