Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

‘ಹುಟ್ಟಿನಿಂದ ಸಾವಿನ ತನಕ ನಾವು ಹೇಗೆ ಬದುಕಬೇಕೆಂದು ಡಾ| ಬಿ.ಆರ್ ಅಂಬೇಡ್ಕರ್ ಬರೆದಿಟ್ಟು ಹೋಗಿದ್ದಾರೆ’: ಅತ್ರಾಡಿ ಅಮೃತ ಶೆಟ್ಟಿ- ಕಹಳೆ ನ್ಯೂಸ್

ಮಾಲಾಡಿ: ‘ಪ್ರತೀಯೊಬ್ಬರ ಬದುಕಿಗೆ ಉತ್ತಮ ದಾರಿ ತೋರಿಸಿದ ಧೀಮಂತ ವ್ಯಕ್ತಿ ಡಾ| ಬಿ.ಆರ್ ಅಂಬೇಡ್ಕರ್. ನಾವು ಅವರ ಕರುಳಿನ ಕುಡಿಗಳು. ತನಗೆ ಎಷ್ಟೇ ಕಷ್ಟ ಬಂದರು ಪರವಾಗಿಲ್ಲ, ಆದರೆ ಶೋಷಣೆಗೆ ಒಳಪಟ್ಟ ಜನ ನೆಮ್ಮದಿಯಾಗಿರಲಿ ಎಂದು ಬಯಸಿದವರು. ಅದಕ್ಕಾಗಿಯೇ ಹುಟ್ಟಿನಿಂದ ಸಾವಿನ ತನಕ ನಾವು ಹೇಗೆ ಬದುಕಬೇಕೆಂದು ಅವರು ಬರೆದಿಟ್ಟು ಹೋಗಿದ್ದಾರೆ ಎಂದು ಪ್ರಗತಿಪರ ಚಿಂತಕರಾದ ಅತ್ರಾಡಿ ಅಮೃತ ಶೆಟ್ಟಿಯವರು ಹೇಳಿದ್ದಾರೆ.


ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮದ ‘ಮಾಲಾಡಿ ಅಂಬೇಡ್ಕರ್’ ಭವನದಲ್ಲಿ ಏ.೧೭ರಂದು ನೆರವೇರಿದ ೧೩೧ನೇ ವರ್ಷದ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ‘ಡಾ| ಬಿ. ಆರ್ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಹಿಳೆಯರ ಹಕ್ಕಿಗಾಗಿ ಹೋರಾಟ ಮಾಡಿ, ಆ ಹಕ್ಕು ಸಿಗದೇ ಇದ್ದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿದ್ದಾರೆ. ಇವತ್ತೂ ಕೂಡ ರಾಜಕೀಯ ನಾಯಕರು ರಾಜೀನಾಮೆ ನೀಡುತ್ತಿದ್ದಾರೆ. ಆದ್ರೆ ಕಾರಣ ಮಾತ್ರ ಬೇರೆ..! ನಮಗೆಲ್ಲರಿಗೂ ರಾಜಕೀಯ, ಶಿಕ್ಷಣ ಹೀಗೆ ಎಲ್ಲದರ ಬಗ್ಗೆ ಅರಿವಿರಬೇಕು, ನಾವು ಕಲಿತ ಶಿಕ್ಷಣ ನಮಗೆ ನಾವು ಯಾರೆಂದು ತಿಳಿಸುವಂತಿರಬೇಕು. ಆಯುಧ ಬಳಸದೆ, ರಕ್ತ ಚೆಲ್ಲದೆ ನಿನಗೆ ಬೇಕಾದದನ್ನು ಪಡೆದು ಸುಂದರ ಬದುಕು ಕಟ್ಟಿಕೋ ಎಂದು ಮತದಾನದ ಹಕ್ಕು ಕೊಟ್ಟಿದ್ದಾರೆ. ಅಂಬೇಡ್ಕರ್ ಎಂದರೆ ಕಿಸೆಯನೋಟು ಅಲ್ಲ, ಬದುಕಿನ ಭಾಗ ಆಗಬೇಕು’ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಲಾಡಿಯ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ ಆಳ್ವಾ ಮಾತನಾಡಿ ‘ಮಾಲಾಡಿಯಲ್ಲಿರುವ ಅಂಬೇಡ್ಕರ್ ಅನುಯಾಯಿಗಳು ಬಲಿಷ್ಠ ಸಂಘಟನೆಯನ್ನು ಕಟ್ಟಿಕೊಂಡು, ಹಲವಾರು ಹೋರಾಟಗಳನ್ನು ಮಾಡಿದ್ದಾರೆ’ ಎಂದು ಸಂಘಟನೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು. ರಾತ್ರಿ  ಸಮಾರೋಪ ಸಮಾರಂಭ ಕಾರ್ಯಕ್ರಮ ನೆರವೇರಿತು. ಈ ವೇಳೆ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ರಕ್ಷಿತ್ ಶಿವಾರಾಂರವರ ನೇತೃತ್ವದಲ್ಲಿ ‘ಜೈ ಭೀಮ್’ ಚಲನಚಿತ್ರ ಉಚಿತವಾಗಿ ಪ್ರದರ್ಶಿಸಲಾಯಿತು.


ಡೀಕಯ್ಯರವರ ಅಧ್ಯಕ್ಷತೆಯಲ್ಲಿ ನೆರವೇರಿದ ಈ ಕಾರ್ಯಕ್ರಮದಲ್ಲಿ ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ರಕ್ಷಿತ್ ಶಿವಾರಾಂ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೇಖರ್ ಕುಕ್ಕೇಡಿ, ಲಕ್ಷಣ್ ಜಿ.ಎಸ್, ಮಾಲಾಡಿ ಗ್ರಾ.ಪಂ ಸದಸ್ಯರಾದ ಪುನೀತ್ ಕುಮಾರ್, ಉಮೇಶ್, ಅಲೇರಿ ಶ್ರೀ ಸತ್ಯಸಾರಮಾನಿ ಮೂಲ ಕ್ಷೇತ್ರ ತಾಲೂಕು ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾದ ಚಂದ್ರಪ್ಪ, ಸೇರಿದಂತೆ ಸಂಘಟನೆಯ ಎಲ್ಲಾ ಸದಸ್ಯರು, ಬೆಳ್ತಂಗಡಿ ತಾಲೂಕಿನ ಅನೇಕರು ಉಪಸ್ಥಿತರಿದ್ದರು