ಎ.29ರಂದು ಬರಿಮಾರು ಗ್ರಾಮದ ಕಲ್ಲೇಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಗಡಿ ಹಾಕಿದ ಸ್ಥಳವಾದ ಜಡ್ತಿಲದಲ್ಲಿ ವಾರ್ಷಿಕ ನೇಮೋತ್ಸವ – ಕಹಳೆ ನ್ಯೂಸ್
ಬಂಟ್ವಾಳ: ಎ.29ರಂದು ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೇಟ್ಟಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಗಡಿ ಹಾಕಿದ ಸ್ಥಳವಾದ ಜಡ್ತಿಲ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ನಡೆಯಲಿದೆ.
ಎ.29ರಂದು ಮಧ್ಯಾಹ್ನ 2.00ಕ್ಕೆ ಬರಿಮಾರು ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ಪರ್ವ ಸೇವೆ ನಡೆದ ಬಳಿಕ ಭಂಡಾರ ಇಳಿದು ಜಡ್ತಿಲ ಶ್ರೀ ಕಾನಲ್ತಾಯ ಮಹಾಕಾಳಿ ದೈವಸ್ಥಾನದಲ್ಲಿ ದೈವಗಳ ಚಾವಡಿಯಲ್ಲಿ ಭಂಡಾರ ಏರಿಲಿದ್ದು, ರಾತ್ರಿ 9.00ಕ್ಕೆ ದೈವಗಳ ನೇಮೋತ್ಸವ ನಡೆಯಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕಾನಲ್ತಾಯ ಮಹಾಕಾಳಿ ದೈವಗಳ ಭಂಡಾರ ಇಳಿದು ಹೋಗುವ ಮೆರವಣಿಗೆಯಲ್ಲಿ ಭಾಗವಹಿಸಿ, ನೇಮೋತ್ಸವದಲ್ಲಿಯು ಭಾಗಿಯಾಗಿ, ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಎಂದು ಜಡ್ತಿಲ ಕುಟುಂಬಿಕರು ಮತ್ತು ಜಡ್ತಿಲ ಮನೆತನದವರು ತಿಳಿಸಿದ್ದಾರೆ.