Tuesday, January 21, 2025
ಸುದ್ದಿ

ಪ್ರಿಯಕರ ಪೋನ್ ಸ್ವೀಕರಿಸಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ –ಕಹಳೆ ನ್ಯೂಸ್

ಹೆಬ್ರಿ : ತನ್ನ ಪ್ರಿಯಕರ ಮೊಬೈಲ್ ಪೋನ್ ಕರೆ ಸ್ವೀಕರಿಸಿಲ್ಲ ಎಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.

ಮೃತಳು ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಕುಸುಮಾ(19) ಎಂದು ಗುರುತಿಸಲಾಗಿದ್ದು, ಸಂತೆಕಟ್ಟೆಯ ಹೋಂ ನರ್ಸಿಂಗ್ ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಕುಸುಮಾ ಚಿಕ್ಕಮಗಳೂರು ಜಿಲ್ಲೆಯ ರಾಹುಲ್ ಎಂಬವನನ್ನು ಪ್ರೀತಿ ಮಾಡುತ್ತಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಹುಲ್ ಕುಸುಮಾಳ ಪೋನ್ ಕರೆಯನ್ನು ಸ್ವೀಕರಿಸಿಲ್ಲ ಎಂಬ ಕಾರಣದಿಂದ ಬೇಸರಗೊಂಡು, ಎ.11ರಂದು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತೀವ್ರವಾಗಿ ಅಸ್ವಸ್ಥಗೊಂಡ ಆಕೆಯನ್ನು ಉಡುಪಿ ಅಜ್ಜರ ಕಾಡು ಸರಕಾರಿ ಆಸ್ಪತ್ರೆಗೆ ಎ.13ರಂದು ದಾಖಲಿಸಲಾಗಿತ್ತು. ಆದರೆ ಎ. 17ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು