ದರ್ಗಾ ಕೆಡವಿದಾಗ, ದೇವಸ್ಥಾನದ ಗುಡಿ ಪತ್ತೆ ; ದರ್ಗಾದ ನವೀಕರಣ ಕಾಮಗಾರಿ ಸ್ಥಗಿತ – ಹಿಂದು ಜಾಗರಣ ವೇದಿಕೆ ಮತ್ತು ವಿಶ್ವಹಿಂದೂ ಪರಿಷತ್ತಿನ ಮನವಿಯಂತೆ ತಹಶೀಲ್ದಾರ್ ಸೂಚನೆ – ಕಹಳೆ ನ್ಯೂಸ್
ಮಂಗಳೂರು ಗಂಜಿಮಠ ಸಮೀಪದ ಮಳಲಿ ಎಂಬಲ್ಲಿ ದರ್ಗಾ ನವೀಕರಣಕ್ಕೆ ಕೆಡವಿದಾಗ ಒಳ ಭಾಗದಲ್ಲಿ ದೇವಸ್ಥಾನ ಶೈಲಿಯ ಕಟ್ಟಡ ಕಂಡುಬಂದಿದ್ದು, ಈ ವಿಷಯ ತಿಳಿಯುತ್ತಿದ್ದಂತೆಯೇ ಹಿಂದು ಜಾಗರಣ ವೇದಿಕೆ ಮತ್ತು ವಿಶ್ವಹಿಂದೂ ಪರಿಷತ್ತಿನ ಜಿಲ್ಲಾ ಪ್ರಮುಖರು ಬೇಟಿಕೊಟ್ಟ ರು, ಸ್ಥಳಕ್ಕೆ ತಹಶೀಲ್ದಾರ್ ಬಂದ ನಂತರ ಸಂಘಟನೆಯ ಪ್ರಮುಖರು ಈ ಕಟ್ಟಡದ ಕಾಮಗಾರಿಯನ್ನೂ ತನಿಖೆ ನಡೆಯುವ ವರೆಗೆ ತಾತ್ಕಾಲಿಕ ತಡೆ ನೀಡುವಂತೆ ಮನವಿ ಮಾಡಿದರು, ಇದಕ್ಕೆ ಪೂರಕವಾಗಿ ಸ್ಪಂದಿಸಿದ ತಹಸೀಲ್ದಾರ್ ದರ್ಗಾ ಕಮಿಟಿಗೆ ಮನವರಿಕೆ ಮಾಡಿ ಅವರು ಒಪ್ಪಿದರು, ನಿಯೋಗದಲ್ಲಿ ಪ್ರಶಾಂತ ಬಂದ್ಯೋಡು, ಶರಣ್ ಪಂಪ್ವೆಲ್, ಹರೀಶ್ ಶಕ್ತಿನಗರ, ಪ್ರಶಾಂತ ಕೆಂಪು ಗುಡ್ಡೆ, ಬುಜಂಗ ಕುಲಾಲ್ ಉಪಸ್ಥಿತರಿದ್ದರು.