ಚಾರ್ಮಾಡಿ ಘಾಟಿಯಲ್ಲಿ ಬರಿಗಾಲಿನಲ್ಲಿ ನಿಂತು ಜನರ ಕಷ್ಟದಲ್ಲಿ ಭಾಗಿಯಾಗಿ ಪರಿಹಾರ ಕಾರ್ಯ ಮಾಡುತ್ತಿರುವ ಜನಾನುರಾಗಿ ಶಾಸಕ ಹರೀಶ್ ಪೂಂಜಾರಿಗೊಂದು ಸಲಾಂ – ಕಹಳೆ ನ್ಯೂಸ್
ಬೆಳ್ತಂಗಡಿ : ಚಾರ್ಮಾಡಿ ಘಾಟಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಮಣ್ಣು ಕುಸಿದು ಸಂಚಾರ ಅಸ್ತವ್ಯಸ್ತವಾಗಿ ಪ್ರಯಾಣಿಕರು ದಾರಿ ಮಧ್ಯೆ ಸಿಕ್ಕಿಹಾಕೊಂಡಿದ್ದರು.
https://youtu.be/SECoa9UNp3s
ಈ ಸುದ್ದಿ ತಿಳಿದ ಕೂಡಲೇ ಯುವ ಶಾಸಕ ಹರೀಶ್ ಪೂಂಜ ಮುಂಜಾನೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ರಸ್ತೆ ತೆರವುಗೊಳಿಸುವ ಪ್ರಯತ್ನ ಆರಂಭಿಸಿದರು. ಸ್ವತಃ ತಾವೇ ಮುಂದೆ ನಿಂತು, ಅವರ ಮಂಗಳವಾರದ ಉಪವಾಸದ ನಡುವಿನಲ್ಲೂ ಘಾಟಿಯನ್ನು ತೆರವುಗೊಳಿಸುವ ಕೆಲಸ ಆರಂಭಿಸಿದರು. ತಮ್ಮ ಕಾರ್ಯಕರ್ತರ ತಂಡವನ್ನು ಕಟ್ಟಿಕೊಂಡು ಬೆಳಗಿನಿಂದಲೇ ಕುಡಿಯುವ ನೀರು, ಹಾಲು, ಔಷಧಿ ಪ್ರಯಾಣಿಕರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಸುಮಾರು 2000 ಜನರಿಗೆ ಆಗುವಷ್ಟು ಮಧ್ಯಾನ್ಹದ ಊಟ ಕೂಡಾ ತಯಾರಿಸಿ ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ತಲುಪಿಸುವ ಕೆಲಸವನ್ನು ಮಾಡಿದರು.
ನಿಜವಾಗಲೂ ಇಂಥಹ ಶಾಸಕರನ್ನು ಪಡೆದ ನಾವೇ ಭಾಗ್ಯವಂತರು.
ಹರೀಶ್ ಪೂಂಜಾರೇ ನಿಮಗೊಂದು ಸಲಾಂ.