ಜಪ್ಪಿನಮೊಗರು ಕಾಮಗಾರಿ ಪೂರ್ಣಗೊಂಡ ಶ್ರೀ ವೈದ್ಯನಾಥ ದೈವಸ್ಥಾನ ಪ್ರಾಂಗಣದ ಮೇಲ್ಛಾವಣಿಯನ್ನು ಉದ್ಘಾಟಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್
ಮಂಗಳೂರು: ಜಪ್ಪಿನಮೊಗರು ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಪ್ರಾಂಗಣಕ್ಕೆ ಮೇಲ್ಛಾವಣಿ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಶಾಸಕರು ನಗರದ ಅತೀ ಪುರಾತನ ಹಾಗೂ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಜಪ್ಪಿನಮೊಗರು ಶ್ರೀ ವೈದ್ಯನಾಥ ದೈವಸ್ಥಾನದ ಪ್ರಾಂಗಣಕ್ಕೆ ಮೇಲ್ಛಾವಣಿ ಅಳವಡಿಸಲು 20 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದು, ಜಾತ್ರಾ ಮಹೋತ್ಸವದ ನಿಟ್ಟಿನಲ್ಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಉದ್ಘಾಟಿಸಿದ್ದೇವೆ ಎಂದರು.
ನಗರದ ದೇವಸ್ಥಾನ ಹಾಗೂ ದೈವಸ್ಥಾನಗಳ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ಅನುದಾನಗಳನ್ನು ಜೋಡಿಸಲಾಗುತ್ತಿದೆ. ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಯಿತಿದೆ. ನಮ್ಮ ಆಡಳಿತಾವಧಿಯಲ್ಲಿ ನಗರದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ವಿಶೇಷವಾಗಿ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಪ್ರೇಮಾನಂದ ಶೆಟ್ಟಿ ,ಸ್ಥಳೀಯ ಕಾಪೆರ್Çೀರೇಟರ್ ವೀಣಾಮಂಗಳ, ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಕಂರ್ಬಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಜೆ.ಅನಿಲ್ ಶೆಟ್ಟಿ ಮನ್ಕುತೋಟಗುತ್ತು ,
ಗುಡ್ಡೆಗುತ್ತಿನ ಗಡಿ ಪ್ರಧಾನರಾದ ಸುಬ್ಬಯ್ಯ ಭಂಡಾರಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಗುಡ್ಡೆಗುತ್ತು ,ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಿರಣ್ ರೈ ಬಜಾಲ್, ಸಂತೋμï ಆಳ್ವ ತೋಚಿಲ ಗುತ್ತು, ರಾಜಾನಂದ ರೈ ಕೊಪ್ಪರಿಗೆ ಗುತ್ತು , ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ, ನಾರಾಯಣ ಪೂಜಾರಿ ಮೊಗೇರ್ ಮನೆ, ಕೃಷ್ಣಶೆಟ್ಟಿ ಕೊಪ್ಪರಿಗೆ ಗುತ್ತು, ದೈವ ನರ್ತಕ ಉಮೇಶ್ ಪಂಬದ, ದಿನೇಶ್ ಅಂಚನ್ ಮುಂತಾದವರು ಭಾಗವಹಿಸಿದ್ದರು.
ಎ.ಕೃಷ್ಣ ಶೆಟ್ಟಿ ತಾರೆಮಾರು ಗಣ್ಯರನ್ನು ಸ್ವಾಗತಿಸಿ ,ಉಮೇಶ್ ಅತಿಕಾರಿ ವಂದನಾರ್ಪಣೆಗೈದರು. ಪ್ರಕಾಶ್ ಮೇಲಾಂಟ ಕಾರ್ಯಕ್ರಮವನ್ನು ನಿರೂಪಿಸಿದರು.