ವೇಣೂರು: ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಡರಾತ್ರಿ ನಡೆದಿದೆ.
ಮೃತ ಯುವಕನನ್ನು ಕಿಲಾರ ನಿವಾಸಿ ವೆಂಕಪ್ಪ ಮಲೆಕುಡಿಯ ಎಂಬವರ ಪುತ್ರ ಪುನೀತ್(19) ಎಂದು ಗುರುತಿಸಲಾಗಿದ್ದು, ಮೃತ ಪುನೀತ್ ಕಳೆದ ಕೆಲ ದಿನಗಳಿಂದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕೆಲಸದ ನಿಮಿತ್ತ ತಂಗಿದ್ದರು. ಆದರೆ ಮಂಗಳವಾರ ರಾತ್ರಿ ಊಟದ ಬಳಿಕ ತಾನು ತಂಗಿದ್ದ ಕೊಠಡಿಯ ಟೇರಿಸ್ ಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಲಿದ್ದು, ಈ ಬಗ್ಗೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.