Monday, January 20, 2025
ದಕ್ಷಿಣ ಕನ್ನಡಬಂಟ್ವಾಳರಾಜಕೀಯಸುದ್ದಿ

ನಾಳೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತ್ರತ್ವದಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ 15 ಸಾವಿರ ಕಾರ್ಯಕರ್ತರು ಹಾಗೂ ಕುಟುಂಬದ ಸದಸ್ಯರ ಮಿಲನ ” ಕಮಲೋತ್ಸವ ” – ಕಹಳೆ ನ್ಯೂಸ್

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಶಾಸಕರ ನೇತ್ರತ್ವದ ಲ್ಲಿ ಬಂಟ್ವಾಳ ಬಿಜೆಪಿ ಮಂಡಲದ ವತಿಯಿಂದ ಮೇ.28 ರಂದು ಕಾರ್ಯಕರ್ತರಿಗಾಗಿ ನಡೆಯಲಿರುವ ” ಕಮಲೋತ್ಸವ” ಕಾರ್ಯಕ್ರಮ ದ ಪೂರ್ವ ತಯಾರಿಯ ಬಗ್ಗೆ ರಾಜ್ಯಾಧ್ಯಕ್ಷ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಕಮಲೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವ ಉದ್ದೇಶದಿಂದ ತಯಾರಿಯ ಪೂರ್ಣ ಮಾಹಿತಿ ಪಡೆದ ಅವರು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಜೊತೆ ಚರ್ಚೆ ನಡೆಸಿದರು.
ಸುಮಾರು 15 ಸಾವಿರ ಕಾರ್ಯಕರ್ತರು ಹಾಗೂ ಕುಟುಂಬ ಸದಸ್ಯರ ಕುಟುಂಬ ಮಿಲನ ಕಮಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು , ಆಟೋಟ ಸ್ಪರ್ಧೆ, ವಿವಿಧ ಮಾದರಿಯ ಖಾದ್ಯ , ಪಾನೀಯ ವ್ಯವಸ್ಥೆ, ಸಂತೆ ಹೀಗೆ ಉತ್ಸವ ನಡೆಯುತ್ತದೆ ಎಂದು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಇದೇ ಸಂದರ್ಭದಲ್ಲಿ ನಾಳೆ ನಡೆಯುವ ಕಮಲೋತ್ಸವ ಕಾರ್ಯಕ್ರಮ ದಲ್ಲಿ ಗೋ ಪೂಜೆಗೆ ತಯಾರಿಯಲ್ಲಿರುವ “ಪೊಂಗನೂರು” ತಳಿಯ ಗಿಡ್ಡ ತಳಿ ದನಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಎಂ.ಇ.ಐ.ಎಲ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಗ್ರಾ.ಪಂ‌‌.ಸದಸ್ಯ ಕಾರ್ತಿಕ್ ಬಳ್ಳಾಲ್ ಮಾಧ್ಯಮ ಜಿಲ್ಲಾ ಸಂಚಾಲಕ ಸಂದೇಶ್ ಕುಮಾರ್ ಶೆಟ್ಟಿ, ಯುವ ಮೋರ್ಚಾ ಜಿಲ್ಲಾ ದ್ಯಕ್ಷ ಗುರುದತ್ ಜಿ.ನಾಯಕ್,
ಪ್ರಮುಖರಾದ ಸುಕೇಶ್ ಚೌಟ , ನಂದಕುಮಾರ್ ರೈ, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ ವಾಮದಪದವು, ದಿನೇಶ್ ಶೆಟ್ಟಿ ದಂಬೆದಾರ್, ಪ್ರವೀಣ್ ಆಳ್ವ, ಸತೀಶ್ ಪೂಜಾರಿ, ಸಚಿನ್ ಅಡಪ, ಚಂದ್ರ ಹಾಸ ಶೆಟ್ಟಿ ನಾರ್ಲ, ಅಜಿತ್ ಶೆಟ್ಟಿ ಕಾರಿಂಜ, ಶುಭಕರ, ಸರ್ಮಿತ್ ಜೈನ್, ರಾಜೀವ ಶೆಟ್ಟಿ ಕೈಕಂಬ ಕುಮಾರ್ ಆಳ್ವ, ಮತ್ತಿತರರು ಉಪಸ್ಥಿತರಿದ್ದರು.