ಸುಳ್ಯ : ಅಜ್ಜನ ಮನೆಗೆ ರಜೆ ಕಳೆಯಲು ಬಂದಿದ್ದ ಬಾಲಕನೋರ್ವ ಕುಕ್ಕುಂಬಳ ಹೊಳೆಗೆ ಸ್ನಾನ ಮಾಡಲು ತೆರಳಿದ ಸಂದರ್ಭ ಮುಳುಗಿ ಮೃತಪಟ್ಟಿರುವ ಘಟನೆ ಅರಂತೋಡಿನಲ್ಲಿ ನಡೆದಿದೆ.
ಮೃತ ಬಾಲಕನನ್ನು ಮನ್ವಿತ್(12 ) ಎಂದು ಗುರುತಿಸಲಾಗಿದೆ. ರಜೆಯ ಸಮಯವಾದರಿಂದ ಮಂಗಳೂರಿನ ಬಾಲಕ ಮನ್ವಿತ್ ಕುಕ್ಕುಂಬಳ ತನ್ನ ಅಜ್ಜನ ಮನೆಗೆ ಬಂದಿದ್ದನು. ಸಂಜೆ ಇಬ್ಬರು ಬಾಲಕರು ಸ್ನಾನ ಮಾಡಲು ಕುಕ್ಕುಂಬಳ ಹೊಳೆಗೆ ತೆರಳಿದ್ದರು. ಸ್ನಾನ ಮಾಡುತ್ತ ಆಡವಾಡುತ್ತಿದ್ದಾಗ ಮನ್ವಿತ್ ನೀರಿನ ಸೆಳೆತೆಗೆ ಸಿಲುಕಿಕೊಂಡು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನೀರಲ್ಲಿ ಮುಳುಗಿದ ವಿಷಯವನ್ನು ಜತೆಗಿದ್ದ ಜತೆಯಲ್ಲಿದ್ದ ಬಾಲಕ ಮನೆಯವರಿಗೆ ಬಂದು ತಿಳಿಸಿದ್ದಾನೆ.