Sunday, January 19, 2025
ಕಾಸರಗೋಡುಸುದ್ದಿ

ಕಾಸರಗೋಡು ಅಲ್ಪ ಸಂಖ್ಯಾತ ಕನ್ನಡಿಗರ ವಿವಿಧ ಸಮಸ್ಯೆ ಮುಂದಿಟ್ಟು ಧರಣಿ ಸತ್ಯಾಗ್ರಹ ; ಕಾಸರಗೋಡಿನ ಕನ್ನಡಿಗರ ಧ್ವನಿ ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಪಾದರು ಭಾಗಿ – ಕಹಳೆ ನ್ಯೂಸ್

ಕಾಸರಗೋಡು, ಏ 29 : ಅಲ್ಪ ಸಂಖ್ಯಾತ ಕನ್ನಡಿಗರ ವಿವಿಧ ಸಮಸೈಗಳನ್ನು ಮುಂದಿಟ್ಟು ಕೊಂಡು ಕನ್ನಡ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸತ್ಯಾಗ್ರಹವನ್ನು ಉದ್ಘಾಟಿಸಿದರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಮಿತಿಯ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ರಯ ಅಧ್ಯಕ್ಷತೆ ವಹಿಸಿದ್ದು, ಕುಂಬಳೆ ಲಕ್ಷ್ಮಣ ಪ್ರಭು, ಕೆ.ಭಾಸ್ಕರ, ಗೋಪಾಲ ಶೆಟ್ಟಿ ಅರಿಬೈಲು, ಶಂಕರನಾರಾಯಣ ಭಟ್, ಆಯಿಷಾ ಪೆರ್ಲ, ನ್ಯಾಯವಾದಿ ಸದಾನಂದ ರೈ ಹಾಗೂ ಕನ್ನಡ ಪರ ಸಂಘಟನೆ ಗಳ ಪ್ರತಿ ನಿಧಿಗಳು ಉಪಸ್ಥಿತದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು