Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮೂವತ್ತೆಂಟು ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ನೆಲ್ಯಾಡಿ ಸುರಕ್ಷಾ ಆರೋಗ್ಯಾಧಿಕಾರಿ ಕೆ. ಪುಷ್ಪವಲ್ಲಿ ನಿವೃತ್ತಿ – ಕಹಳೆ ನ್ಯೂಸ್

ಉಪ್ಪಿನಂಗಡಿ: ಮೂವತ್ತೆಂಟು ವರ್ಷಗಳ ಕಾಲ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇಲ್ಲಿನ ಪೆರಿಯಡ್ಕದ ಕೆ. ಪುಷ್ಪವಲ್ಲಿ ಅವರು ಎ.30ರಂದು ಸೇವಾ ನಿವೃತ್ತಿಯನ್ನು ಹೊಂದಲಿದ್ದಾರೆ.

1988ರಲ್ಲಿ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯಕ್ಕೆ ಸೇರ್ಪಡೆಗೊಂಡ ಇವರು ಬೆಳಗಾಂನಲ್ಲಿ 3 ವರ್ಷ, ಉಪ್ಪಿನಂಗಡಿಯಲ್ಲಿ 9 ಹಾಗೂ 26 ವರ್ಷಗಳ ಕಾಲ ನೆಲ್ಯಾಡಿ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ತನ್ನ ಸೇವಾ ಅವಧಿಯಲ್ಲಿ ಸುರಕ್ಷಾ ಆರೋಗ್ಯಾಧಿಕಾರಿ (ಪಿಎಚ್‍ಸಿಒ) ಆಗಿ ಪದೋನ್ನತಿ ಹೊಂದಿ, ನೆಲ್ಯಾಡಿಯಲ್ಲಿ ಕರ್ತವ್ಯದಲ್ಲಿದ್ದು, ಎ.30ರಂದು ಸೇವಾ ನಿವೃತ್ತಿಯನ್ನು ಹೊಂದಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು