ಬೆಂಗಳೂರು : ರಾಜ್ಯದಲ್ಲೇ ಪಾತಾಳಕ್ಕೆ ಕುಸಿದಿದ್ದ ಟೊಮೇಟೊ ದರ ಇದೀಗ ಗಗನಕ್ಕೇರಿದ್ದು, ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. 4-5 ತಿಂಗಳ ನಂತರ ಇದೀಗ ಮತ್ತೆ ಟೊಮೆಟೊ ದರ ದಿಢೀರ್ ಹೆಚ್ಚಳವಾಗಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತಿ ಒಂದು ಕೆ.ಜಿ ಟೊಮ್ಯಾಟೊ 60 ರೂಪಾಯಿಯಾಗಿದೆ.
ತಿಂಗಳ ಹಿಂದೆ ಟೊಮ್ಯಾಟೊ ದರ 10ರಿಂದ 12 ರೂಪಾಯಿ ಇತ್ತು. ಒಂದು ವಾರದಿಂದ ನಿರಂತರವಾಗಿ ಟೊಮ್ಯಾಟೊ ಬೆಲೆ ಏರಿಕೆ ಬಿಸಿ ತಟ್ಟಿದೆ.