Friday, January 24, 2025
ಉಡುಪಿಸುದ್ದಿ

ಎಬಿವಿಪಿ ಉಡುಪಿ ವತಿಯಿಂದ ಪಿಎಸ್‍ಐ ನೇಮಕಾತಿ ಮತ್ತು ಕರ್ನಾಟಕ ಪ್ರಾದ್ಯಾಪಕರ ನೇಮಕಾತಿಯಲ್ಲಿ ನಡೆದ ಅಕ್ರಮವನ್ನು ಖಂಡಿಸಿ, ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಏನ್ ಅವರಿಗೆ ಮನವಿ – ಕಹಳೆ ನ್ಯೂಸ್

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಪಿಎಸ್‍ಐ ನೇಮಕಾತಿ ಮತ್ತು ಕರ್ನಾಟಕ ಪ್ರಾದ್ಯಾಪಕರ ನೇಮಕಾತಿಯಲ್ಲಿ ನಡೆದ ಅಕ್ರಮ ವನ್ನು ಖಂಡಿಸಿ ಅಕ್ರಮ ಚಟುವಟಿಕೆ ಹಾಗು ಭ್ರಷ್ಟಾಚಾರದ ವಿರುದ್ಧ ಅತ್ಯಂತ ಕಠಿಣ ಕ್ರಮ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯದ ವೀಣಾ ಬಿ.ಏನ್ ಇವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಆಶಿಶ್ ಶೆಟ್ಟಿ, ತಾಲೂಕು ಸಂಚಾಲಕ ಸುಮುಖ ಭಟ್, ನಗರ ಕಾರ್ಯದರ್ಶಿ ಆಕಾಶ್, ಸಹ ಕಾರ್ಯದರ್ಶಿಗಳಾದ ಹೃತಿಕ್, ಸಿಂಚನ, ಶ್ರೀಹರಿ, ಪ್ರಮುಖ ಕಾರ್ಯಕರ್ತರಾದ ಅಜಿತ್, ಶಾರ್ವರಿ, ದೀಪೇಶ್, ಶ್ರೀಕಂಠ, ದಿಶಾನ್, ಭೂಷಣ್, ಸಂಹಿತ್ ಮತ್ತಿತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು