Friday, January 24, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮಳೆ ಅವಾಂತರ : ಡಾಮಾರು ರಸ್ತೆಯಲ್ಲಿ ತುಂಬಿಕೊಂಡ ಮಣ್ಣು : ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಳಪಟ್ಟ ಪರ್ಪುಂಜದಿಂದ ಕುರಿಯ ಸಂಪರ್ಕ ರಸ್ತೆ ಸ್ಧಿತಿ ಅಯೋಮಯ – ಕಹಳೆ ನ್ಯೂಸ್

ಮಳೆಗಾಲ ಆರಂಭವಾಗುತ್ತಾ ಇದ್ದಂತೆ ಹಲವಾರು ಕಡೆಗಳಲ್ಲಿ ರಸ್ತೆ ಸಮಸ್ಯೆಗಳು ತಲೆದೂರಲಾರಂಭಿಸಿದೆ. ಅಂತೆಯೇ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಳಪಟ್ಟ ಪರ್ಪುಂಜದಿಂದ ಕುರಿಯ ಸಂಪರ್ಕಿಸುವ ಡಾಮಾರು ರಸ್ತೆ ಸಂಪೂರ್ಣವಾಗಿ ಮಣ್ಣಿನಿಂದ ತುಂಬಿ ಹೋಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಪರ್ಪುಂಜದಿಂದ ಕುರಿಯ ಹಾಗೂ ಮುಂಡೂರು ಸಂಪರ್ಕಿಸುವ ರಸ್ತೆ ಇದಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತದೆ. ಮಳೆ ಪ್ರಾರಂಭವಾಗುತ್ತಿದ್ದಂತೆ ರಸ್ತೆಯ ಸ್ಧಿತಿ ಹೀಗಾದ್ರೆ, ಮುಂದೆ ಈ ರಸ್ತೆಯಲ್ಲಿ ಸಂಚಾರ ಮಾಡೋದಾದರೂ ಹೇಗೆ ಅನ್ನೋದು ಇಲ್ಲಿನ ಸ್ಧಳಿಯರ ಹಾಗೂ ವಾಹನ ಸವಾರರ ಮಾತಾಗಿದೆ. ಡಾಮಾರು ರಸ್ತೆಯಲ್ಲಿ ತುಂಬಿರುವ ಮಣ್ಣನ್ನು ತೆರವುಗೊಳಿಸಿ, ರಸ್ತೆಗೆ ಮಣ್ಣು ಬೀಳದಂತೆ ಶಾಶ್ವತ ಪರಿಹಾರವನ್ನ ಸಂಬಂಧಪಟ್ಟವರು ಕಲ್ಪಿಸಿಕೊಡಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು