Friday, January 24, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬಿಜೆಪಿ ವಿರುದ್ಧ ಸುಳ್ಳು ಆಪಾದನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರ ಆರಕ್ಷಕ ಠಾಣೆ ಠಾಣಾಧಿಕಾರಿಗೆ ದೂರು ನೀಡಿದ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ – ಕಹಳೆ ನ್ಯೂಸ್

ಪುತ್ತೂರು : ಜನತಾ ಪಾರ್ಟಿಯ ವಿರುದ್ಧ ಜನರಲ್ಲಿ ಧ್ವೇಶ ಭಾವನೆಗಳು ಮೂಡುವ ರೀತಿಯಲ್ಲಿ, ನಿರಾಧಾರಿತ ಸುಳ್ಳು ಆಪಾದನೆ ಮಾಡಿದ ಅಮಲ ರಾಮಚಂದ್ರ, ರಮಾನಾಥ ವಿಟ್ಲ, ಮೌರಿಸ್ ಮಸ್ಕರೇನಸ್, ಅಶ್ರಫ್ ವಿಟ್ಲ, ಕೇಶವ ಪಡೀಲು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ನಗರ ಆರಕ್ಷಕ ಠಾಣೆ ಠಾಣಾಧಿಕಾರಿಗೆ, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಅವರು ದೂರು ಸಲ್ಲಿಸಿದ್ದಾರೆ.

 
ಅಮಲ ರಾಮಚಂದ್ರ, ರಮಾನಾಥ ವಿಟ್ಲ, ಮೌರಿಸ್ ಮಸ್ಕರೇನಸ್, ಅಶ್ರಫ್ ವಿಟ್ಲ, ಕೇಶವ ಪಡೀಲು ಅವರು ಮೇ 2ರಂದು ಪತ್ರಿಕಾಗೋಷ್ಟಿ ನಡೆಸಿ, ಭಾರತೀಯ ಜನತಾ ಪಾರ್ಟಿ ವಿರುದ್ಧ ಜನರಲ್ಲಿ, ಧ್ವೇಶ ಭಾವನೆಗಳು ಮೂಡುವ ರೀತಿಯಲ್ಲಿ ಹಲವಾರು ನಿರಾಧಾರಿತ ಸುಳ್ಳು ಆಪಾದೆನೆಗಳನ್ನು ಮಾಡಿದ್ದಾರೆ. ಜೊತೆಗೆ, ಕಂದಾಯ ಇಲಾಖೆಯಿಂದ ಬಿಜೆಪಿ ಕಛೇರಿಗೆ ಮಾಮೂಲು ಸಂದಾಯ ಆಗುತ್ತದೆ ಎಂದು ಆಪಾದನೆ ಮಾಡಿದ್ದಾರೆ. ಪತ್ರಿಕಾಗೋಷ್ಟಿ ಸಂಗತಿಗಳನ್ನು ಮಾಧ್ಯಮಗಲ್ಲಿ ಪ್ರಸಾರಗೊಳ್ಳುವಂತೆ ಮಾಡಿ, ಪಕ್ಷದ ಗೌರವಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನ ಮಾಡಿದ್ದಾರೆ. ಆದ್ದರಿಂದ ಸುಳ್ಳು ಆಪಾದನೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ಅವರು ದೂರು ಸಲ್ಲಿಸಿದ್ದಾರೆ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು