Friday, January 24, 2025
ದಕ್ಷಿಣ ಕನ್ನಡಸುದ್ದಿ

ಕಲ್ಲಡ್ಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮೋಹನ್ ದಾಸ್ ರವರ ಚಿಕಿತ್ಸಾ ವೆಚ್ಚಕ್ಕಾಗಿ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನ – ಕಹಳೆ ನ್ಯೂಸ್

ಕಲ್ಲಡ್ಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ, ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 19 ವರ್ಷದ ಮೋಹನ್ ದಾಸ್ ರವರ ಚಿಕಿತ್ಸಾ ವೆಚ್ಚಕ್ಕಾಗಿ ಯುವಶಕ್ತಿ ಸೇವಾಪಥದ ವತಿಯಿಂದ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆಯು ಸಂಪನ್ನಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಲ್ಲಡ್ಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮೋಹನ್ ದಾಸ್ ರವರ ಚಿಕಿತ್ಸೆಗಾಗಿ ಹೆಚ್ಚಿನ ಮೊತ್ತಕ್ಕಾಗಿ ಬಡಕುಟುಂಬ ಇಟ್ಟ ಬೇಡಿಕೆಗೆ ಸ್ಪಂದಿಸಿದ ಯುವಶಕ್ತಿ ಸೇವಾಪಥ ಹಾಗೂ ಅನೇಕ ಸಹೃದಯಿ ದಾನಿಗಳಿಂದ ಮೂರು ದಿನಗಳಲ್ಲಿ ಸಂಗ್ರಹಿಸಲ್ಪಟ್ಟ ಸುಮಾರು 3,19,439/- (ಮೂರು ಲಕ್ಷ ಹತ್ತೊಂಬತ್ತು ಸಾವಿರದ ನಾಲ್ನೂರ ಮೂವತ್ತೊಂಬತ್ತು ರೂಪಾಯಿ) ಚೆಕ್ಕನ್ನು ಮೆ.04ರಂದು ಎ.ಜೆ ಆಸ್ಪತ್ರೆಯಲ್ಲಿ ಸೇವಾಪಥದ ಪ್ರಮುಖರ ಉಪಸ್ಥಿತಿಯಲ್ಲಿ ಬಡಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೇವಾಪಥದ ಪೆÇಳಲಿ ಸೇವಾಸಿಂಧು ಯೋಜನೆಯಲ್ಲಿ ಓಂ ಶ್ರೀಸಾಯಿ ಗಣೇಶ ಸೇವಾಟ್ರಸ್ಟ್ ಮುಖಾಂತರ ಭಾಗವಹಿಸಿದ್ದ ಮೋಹನ್ ದಾಸ್ ರವರ ಚಿಕಿತ್ಸೆಗೆ ಸೇವಾಪಥ ಸಾಥ್ ನೀಡಿದೆ. ಇದೀಗ ಮೋಹನ್ ದಾಸ್ ಚೇತರಿಸಿಕೊಳ್ಳುತ್ತ್ತಿದ್ದು, ಸೇವಾಪಥದಲ್ಲಿ ಸಹಕರಿಸಿದ ಸರ್ವಬಂಧುಗಳಿಗೆ ಯುವಶಕ್ತಿ ಸೇವಾಪಥದ ಪ್ರಮುಖರು ಧನ್ಯವಾದಗಳನ್ನು ತಿಳಿಸಿದರು.