Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕಹಳೆ ನ್ಯೂಸ್ ಇಂಪ್ಯಾಕ್ಟ್ : ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಳಪಟ್ಟ ಪರ್ಪುಂಜ-ಕುರಿಯ ಸಂಪರ್ಕ ರಸ್ತೆಯಲ್ಲಿ ತುಂಬಿಕೊಂಡಿದ್ದ ಮಣ್ಣು : ವರದಿ ಕಂಡು ಎಚ್ಚೆತ್ತು ಡಾಮಾರು ರಸ್ತೆಯಲ್ಲಿದ್ದ ಮಣ್ಣು ತೆರವು – ಕಹಳೆ ನ್ಯೂಸ್

ಡಾಮಾರು ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ಅವಾಂತರ ಸೃಷ್ಟಿಸಿದ್ದ ರಸ್ತೆಗೆ ಇದೀಗ ಮುಕ್ತಿ ಸಿಕ್ಕಿದೆ. ನಿನ್ನೆ ಸುರಿದ ಮಳೆಗೆ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಳಪಟ್ಟ ಪರ್ಪುಂಜದಿಂದ ಕುರಿಯ ಸಂಪರ್ಕಿಸುವ ಡಾಮಾರು ರಸ್ತೆ ಸಂಪೂರ್ಣವಾಗಿ ಮಣ್ಣಿನಿಂದ ತುಂಬಿ ಹೋಗಿ, ವಾಹನ ಸವಾರರು ಪರದಾಡುವಂತಾಗಿದೆ. ಈ ಬಗ್ಗೆ ಕಹಳೆ ವಾಹಿನಿ ವರದಿ ಪ್ರಸಾರ ಮಾಡಿತ್ತು. ವರದಿ ಕಂಡು ಎಚ್ಚೆತ್ತ ಸಂಬಂಧಪಟ್ಟ ವ್ಯಕ್ತಿಗಳು ಡಾಮಾರು ರಸ್ತೆಯಲ್ಲಿ ತುಂಬಿಕೊಂಡಿದ್ದ ಮಣ್ಣನ್ನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರಸ್ತೆಯಿಂದ ನೂರಾರು ವಾಹನ ಸವಾರರು ಹಾಗೂ ಪಾದಚಾರಿಗಳು ಪ್ರತಿನಿತ್ಯ ಸಂಚರಿಸುತ್ತಾರೆ. ಡಾಮಾರು ರಸ್ತೆಯಲ್ಲಿದ್ದ ಮಣ್ಣು ತೆರವುಗೊಳಿಸಿದ್ದರಿಂದ ಜನರು ನಿಟ್ಟುಸಿರುಬಿಡುವಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು