Thursday, January 23, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಕೊಡಾಜೆ: ಬಸ್‍ಸ್ಟ್ಯಾಂಡ್‍ಗೆ ನುಗ್ಗಿದ ಟೋಯಿಂಗ್ ಲಾರಿ-ಚಾಲಕ ಗಂಭೀರ – ಕಹಳೆ ನ್ಯೂಸ್

ಬಂಟ್ವಾಳ: ಟೋಯಿಂಗ್ ಲಾರಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಇರುವ ಅಂಗಡಿ ಮತ್ತು ಬಸ್‍ಸ್ಟ್ಯಾಂಡ್‍ಗೆ ನುಗ್ಗಿದ ಘಟನೆ ಕಳೆದ ತಡರಾತ್ರಿ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದೆ.

ಘಟನೆಯಲ್ಲಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದಾನೆಂದು ತಿಳಿದು ಬಂದಿದೆ. ನಿನ್ನೆ ತಡರಾತ್ರಿ 1 ಗಂಟೆಯ ವೇಳೆಗೆ ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಏಕಾಏಕಿ ಚಾಲಕನ ನಿಯಂತ್ರಣ ಕಳೆದು ಕೊಡಾಜೆ ಜಂಕ್ಷನ್ ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿಗೆ, ಢಿಕ್ಕಿ ಹೊಡೆದು ಹೋಟೆಲ್‍ಗೆ ನುಗ್ಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಿಂದ ಚಾಲಕ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಆತನನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.ಶಿರಸಿ ಮೂಲದ ಲಾರಿ ಎಂದು ತಿಳಿದು ಬಂದಿದೆ. ಘಟನೆಯಿಂದ ಅಂಗಡಿಗಳಿಗೆ ಹಾನಿಯಾಗಿದ್ದು, ಚಾಲಕ ನಿದ್ರೆ ಮಂಪರಿನಲ್ಲಿದ್ದ ಎನ್ನಲಾಗಿದೆ.